ತಾಯಿ ಮತ್ತು ಮಕ್ಕಳು ಕಾಣೆ:ಪ್ರಕರಣ ದಾಖಲು

ಬಳ್ಳಾರಿ,ಜು.08(ಕರ್ನಾಟಕ ವಾರ್ತೆ): ನಗರದ ಬಂಡಿಮೋಟ್ ನಿವಾಸಿ 30 ವರ್ಷದ ದುರ್ಗಮ್ಮ ಎಂಬ ಮಹಿಳೆ ಮತ್ತು 2ವರ್ಷದ ಜಾನಕಿ ಹಾಗೂ 6ವರ್ಷದ ಅನುಷಾ ಎಂಬ ಮಕ್ಕಳು ಕಾಣೆಯಾಗಿರುವುದರ ಕುರಿತು ಜು.7ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಪೊಲಿಸ್ ಸಬ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Missing bellary


ಕಾಣೆಯಾದ ಮಹಿಳೆ ಚಹರೆಯ ಗುರುತು. 5 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಬಣ್ಣದ ಬಿಳಿ ಲೈನ್ ಇರುವ ಸಿರೇ ಹಾಗೂ ಕಪ್ಪು ಬಣ್ಣದ ಅದರಲ್ಲಿ ಬಿಳಿ ಚುಕ್ಕೆ ಇರುವ ಕುಪ್ಪಸ ಧರಿಸಿರುತ್ತಾಳೆ ಕನ್ನಡ, ತೆಲುಗು, ಹಿಂದಿ ಭಾಷೆ ಮಾತನಾಡುತ್ತಾಳೆ.
ಜಾನಕಿಯ ಚಹರೆಯ ಗುರುತು: 2 ಅಡಿ ಎತ್ತರ, ಕಪ್ಪು ಮೈ ಬಣ್ಣ, ಬನಿಯನ್ ಹಾಗೂ ನೀರಲೆ ಬಣ್ಣದ ಹಾಫ್ ಚಡ್ಡಿ ಧರಿಸಿರುತ್ತಾಳೆ ಬುಡಬುಡಗೆ ಭಾಷೆ ಮಾತನಾಡುತ್ತಾಳೆ.

Missing 1 bellary


ಅನುಷಾ ಚಹರೆಯ ಗುರುತು: 2.1/2 ಅಡಿ ಎತ್ತರ, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಇರುತ್ತದೆ. ಕಪ್ಪು ಬಣ್ಣದ ಬನಿಯನ್ ಹಾಗೂ ಹಳದಿ ಬಣ್ಣದ ಹಾಪ್ ಚಡ್ಡಿ ಧರಿಸಿರುತ್ತಾಳೆ ಬುಡಬುಡುಗೆ ಭಾಷೆ ಮಾತನಾಡುತ್ತಾಳೆ.
ಕಾಣೆಯಾದವರ ಬಗ್ಗೆ ಯಾವುದಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಅವರು ಕೋರಿದ್ದಾರೆ.

Latest Indian news

Popular Stories