bellary

ಯುವಕ ಕಾಣೆ Shivukumar Achari

ಬಳ್ಳಾರಿ,ಜು.14(ಕರ್ನಾಟಕ ವಾರ್ತೆ): ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 21 ವರ್ಷದ ಕಮ್ಮಾರಿ ಶಿವುಕುಮಾರ ಆಚಾರಿ ಎಂಬ ಯುವಕ ಜು.05 ರಿಂದ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆಫ್ ಪೊಲೀಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವಕನ ಚಹರೆ ಗುರುತು: 5.4 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಎಡ ಅಂಗೈ ಮೇಲೆ ಹಳೇ ಗಾಯದ ಗುರುತು, ಮೂಗಿನ ಮೇಲೆ ಒಂದು ಕಪ್ಪು ಮಚ್ಚೆ ಗುರುತು, ಕೆಂಪು ಬಣ್ಣದ ಚೌಕಳಿಯ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ಯುವಕನ ಮಾಹಿತಿ ದೊರೆತಲ್ಲಿ ಪಿ.ಎಸ್.ಐ. ತೆಕ್ಕಲಕೋಟೆ ಪೊಲೀಸ್ ಠಾಣೆ ದೂ.ಸಂ:08396-248013/9480803055. ಸಿ.ಪಿ.ಐ. ತೆಕ್ಕಲಕೋಟೆ ವೃತ್ತ ತೆಕ್ಕಲಕೋಟೆ ದೂ.ಸಂ.08396-248044, ಡಿ.ಎಸ್.ಪಿ. ಗ್ರಾಮೀಣ ಉಪ-ವಿಭಾಗ ಬಳ್ಳಾರಿ ದೂ.ಸಂ. 08392-276000. ಎಸ್.ಪಿ. ಬಳ್ಳಾರಿ. ದೂ.ಸಂ. 08932-258400 ಗೆ ಸಂಪರ್ಕಿಸಲು ಕೊರಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button