ಸಿಎಂ ಸಿದ್ದರಾಮಯ್ಯ’ಗೆ 7 ನೇ ವೇತನ ಆಯೋಗದ ವರದಿ ಸಲ್ಲಿಕೆ, ಚುನಾವಣೆ ಬಳಿಕ ಜಾರಿ ಸಾಧ್ಯತೆ!

ಬೆಂಗಳೂರು: ‘ಸಿಎಂ ಸಿದ್ದರಾಮಯ್ಯ’ಗೆ 7 ನೇ ವೇತನ ಆಯೋಗದ ವರದಿ ಸಲ್ಲಿಕೆ ಮಾಡಲಾಗಿದೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ 7 ನೇ ವೇತನ ಆಯೋಗದ ವರದಿ ಪಡೆದಿದ್ದೇನೆ, ಶೇ.27 ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದಾರೆ ಸಂಬಂಧ ಇಲಾಖೆಯುವರು ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತವಾದಕ್ರಮವನ್ನುಕೈಗೊಳ್ಳುತ್ತಾರೆ ಅಂಥ ಹೇಳಿದರು.

ಸದ್ಯದದ ಪ್ರಕಾರ ವರದಿಯನ್ನು ಸ್ವೀಕರಿಸಿದ್ದು, ಜೂನ್‌ ಬಳಿಕವೇ ಇದರ ಜಾರಿ ಬಗ್ಗೆ ಅಂತಿಮವಾದ ತೀರ್ಮಾನವನ್ನು ತೆಗದುಕೊಳ್ಳಲಾಗುವುದು ಎನ್ನಲಾಗಿದೆ.

ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ ರಾವ್ ಅವರ ಅಧ್ಯಕ್ಷತೆಯಲ್ಲಿ 2022ರ ನವೆಂಬರ್‌ 19ರಂದು 7ನೇ ವೇತನ ಆಯೋಗ ರಚಿಸಲಾಗಿತ್ತು ಬಳಿಕ ಅವಧಿಯನ್ನು 2023 ಮೇ 15ರಿಂದ ನವೆಂಬರ್‌ 18ರವರೆಗೆ ವಿಸ್ತರಿಸಲಾಗಿತ್ತು. ನಂತರ 2ನೇ ಬಾರಿ ಇದೇ ಮಾರ್ಚ್ 15ರವರೆಗೆ ವಿಸ್ತರಿಸಲಾಗಿತ್ತು. ಇಂದು ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದ್ದಾರೆ.

Latest Indian news

Popular Stories