
Bengaluru UrbanFeatured Story
ಹೊಸಪೇಟೆ : ಟಿಪ್ಪರ್ ಕಾರಿಗೆ ಡಿಕ್ಕಿ, ಕಾರಿನಲ್ಲಿದ್ದ 7 ಮಂದಿ ಮೃತ್ಯು
ಹೊಸಪೇಟೆ: ಸಮೀಪದ ಗುಂಡಾ ಅರಣ್ಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ಬೀಕರ ಅಪಘಾತ ಸಂಭವಿಸಿ ಘಟನೆಯಲ್ಲಿ 7 ಮಂದಿ ಮೃತಾಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಟಿಯರಿಂಗ್ ವೀಲ್ ತುಂಡಾಗಿ ಇನ್ನೊಂದು ರಸ್ತೆಗೆ ನುಗ್ಗಿದ ಟ್ರಕ್ ಕಾರೊಂದಕ್ಕೆ ಡಿಕ್ಕಿ ಹೊಡೆದು ಕೆಳಗೆ ಉರುಳಿ ಬಿದ್ದಿದ್ದು, ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಒಂದು ಅದೇ ಕಾರಿಗೆ ಡಿಕ್ಕಿ ಹೊಡೆದಿದೆ.
ಹೊಸಪೇಟೆ ಕಡೆಯಿಂದ ಚಿತ್ರದುರ್ಗ ಕಡೆಗೆ ತೆರಳುತ್ತಿದ್ದ ಟ್ರಕ್‌ನ ಸ್ಟಿಯರಿಂಗ್ ವಿಲ್ ತುಂಡಾಗಿ ಅದು ರಸ್ತೆ ವಿಭಜಕ ದಾಟಿಕೊಂಡು ಇನ್ನೊಂದು ಬದಿಯ ರಸ್ತೆಗೆ ನುಗ್ಗಿತ್ತು. ಅದೇ ವೇಳೆ ಹರಪನಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಮಹೇಂದ್ರ ಎಸ್‌ಯುವಿ 300 ವಾಹನ ಬರುತ್ತಿತ್ತು. ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಎಸ್‌ಯುವಿಗೆ ಡಿಕ್ಕಿ ಹೊಡೆಯಿತು. ಹೀಗಾಘಿ ಕಾರಿನಲ್ಲಿದ್ದ ಎಲ್ಲಾ ಏಳು ಮಂದಿ ಮೃತಪಟ್ಟರು.
ಮೃತರೆಲ್ಲ ಹೊಸಪೇಟೆಯ ಉಕ್ಕಡಕೇರಿಯವರು.ಮೃತಪಟ್ಟವರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ 5 ವರ್ಷದ ಹೆಣ್ಣು ಮಗು ಸೇರಿದೆ.




