ಬೆಳಗಾವಿ, ಅಕ್ಟೋಬರ್ 09: ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರ ವ್ಯಾಪ್ತಿಯ ಗ್ರಾಮದಲ್ಲಿ ರೈತರೊಬ್ಬರ ಮೇಲೆ ಕರಡಿ ದಾಳಿ ಮಾಡಿದ್ದು ರೈತನೊಬ್ಬನನ್ನು 2 ಕಿಲೋ ಮೀಟರ್ ಎಳೆದುಕೊಂಡು ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಘಟನೆಯಲ್ಲಿ ದಾಳಿಗೀಡಾದ ರೈತ ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಜಮೀನಿನಲ್ಲಿ ಇತರ ಕಾರ್ಮಿಕರ ಜೊತೆಗೆ ಕೆಲಸ ಮಾಡಿಕೊಂಡಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಸೋಮವಾರ ನಡೆದಿದೆ.
ಜಿಲ್ಲೆಯ ಖಾನಾಪುರ ಸಮೀಪದ ಘೋಸೆಬದ್ರುಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. 63 ವರ್ಷದ ರೈತ ಭೀಮಾಜಿ ಮಿರಾಶಿ ಅವರು ಈ ಕರಡಿ ದಾಳಿಗೆ ಬಲಿಯಾಗಿದ್ದಾರೆ.ರೈತರ ಭೀಮಾಜಿ ಅವರು ತಮ್ಮ ಜಮೀನಿನಲ್ಲಿ ಎಂದಿನಿಂತೆ ಇತರ ಕಾರ್ಮಿಕ ಜೊತೆಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಎಕಿ ಅವರ ಎರಗಿ ಬಂದ ಕರಡಿ ದಾಳಿ ನಡೆಸಿದೆ. .