ಮೊಬೈಲ್‌ ಕೊಡಲಿಲ್ಲ ಎನ್ನುವ ಕಾರಣಕ್ಕೆ ತಮ್ಮನ್ನೇ ಕೊಂದ ಅಣ್ಣ

ಬೆಂಗಳೂರು: ಮೊಬೈಲ್‌ ಮೊಬೈಲ್‌ ಕೊಡಲಿಲ್ಲ ಎನ್ನುವ ಕಾರಣಕ್ಕೆ ಅಣ್ಣ ತಮ್ಮನ್ನೇ ಕೊಂದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರದಲ್ಲಿ ನಡೆದಿದೆ.

ಕೊಲೆಯಾದವನನ್ನು ಪ್ರಾಣೇಶ್‌ ಅಂತ ತಿಳಿದು ಬಂದಿದ್ದು, ಕೊಲೆ ಆರೋಪಿಯನ್ನು ಶಿವಕುಮಾರ್ ಎನ್ನಲಾಗಿದೆ. ತನಿಖೆ ವೇಳೆಯಲ್ಲಿ ಶಿವಕುಮಾರ್‌ ಗಾರೆ ಕೆಲಸ ಮಾಡುತ್ತಿದ್ದ ಜಾಗದಿಂದ ಸುತ್ತಿಗೆಯನ್ನು ತೆಗೆದುಕೊಂಡು ಹೋಗಿ ಕೊಲೆ ಮಾಡಿರುವ ಅಂಶ ಕಂಡು ಬಂದಿದೆ.

ಈ ನಡುವೆ ಪ್ರಾಣೇಶ್‌ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಶಿವಕುಮಾರ್‌ ನನ್ನು ಬಂಧಿಸಿ ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.

Latest Indian news

Popular Stories