ಬೆಂಗಳೂರು: ಖಾಲಿ ನಿವೇಶನ, ಫ್ಲ್ಯಾಟ್ ಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಂದ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರೋಪಿ ಕೃಷ್ಣ ಕುಮಾರ್ ಅವರನ್ನು ಬಂದಿಸುವಲ್ಲಿ ಶೇಷಾದ್ರಿಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಇವರ ವಿರುದ್ದ ಹಲವು ಠಾಣೆಗಳಲ್ಲಿ 9 ಪ್ರಕರಣಗಳು ಮೊದಲೇ ದಾಖಲಾಗಿದ್ದವು’ಲಗ್ಗೆರೆ ನಿವಾಸಿ ಕೃಷ್ಣ ಕುಮಾರ್, ಅಸಲಿ ಹೆಸರು ಮರೆಮಾಚಿ ನಕಲಿ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಎನ್ನಲಾಗಿದೆ.
‘ಅರ್ಜಿ ಸಲ್ಲಿಕೆ ವೇಳೆ ಬಾಡಿಗೆ ಮನೆ ವಿಳಾಸ ನೀಡುತ್ತಿದ್ದ. ದಾಖಲೆಗಳು ನಿಜವೆಂದು ನಂಬುತ್ತಿದ್ದ ಬ್ಯಾಂಕ್‌ಗಳು ಇವನಿಗೆ ಇದುವರೆಗೆ ಸುಮಾರು ₹20 ಕೋಟಿ ಸಾಲ ನೀಡಿವೆ. ತಿಂಗಳ ಕಂತು ಕಟ್ಟದೆ ಮೋಸ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂದಿಸಲಾಗಿದೆ.