ತುಮಕೂರು : ಲಿಂಗಾಯತ ಅಧಿಕಾರಿಗಳಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿರುವ ಶಾಮನೂರು ಶಿವಶಂಕರಪ್ಪ ನವರಿಗೆ ತಿರುಗೇಟು ನೀಡಿರುವ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಸಾಧ್ಯ ವಿಲ್ಲ ಎಂದಿದ್ದಾರೆ.
ಯಾರು ಸಮರ್ಥರು ಹಾಗೂ ಯಾರೂ ಪ್ರಮಾಣಿಕರು ಎಂದು ನೋಡಿಯೇ ಕೆಲಸ ನೀಡಲಾಗುವುದು.ಆದರೆ ಕೆಲಸ ಕೊಡುವಾಗ ಜಾತಿ ಆಧಾರದ ಮೇಲೆ ಹುದ್ದೆಯನ್ನು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಚ್ ಡಿ ಕೆ ಯವರು ಜೋತಿಷ್ಯ ನುಡಿಯಲು ಪ್ರಾರಂಭಿಸಿದ್ದಾರೆ ಎಂದರು.
ಬೆದರಿಕೆ ಕರೆ ಬಂದಿರುವ ಬಗ್ಗೆ ಸಾಹಿತಿಗಳು ನನ್ನ ಬಳಿ ಹೇಳಿಕೊಂಡಿದ್ದರು. ಸಿಸಿಬಿ ಪೊಲೀಸರು ದಾವಣಗೆರೆ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಆ ಪತ್ರದ ಹಸ್ತಾಕ್ಷರ ನೋಡಿ ಆರೋಪಿಯನ್ನು ಬಂಧಿಸಿದ್ದಾರೆ. ಬೆದರಿಕೆ ಪತ್ರ ಯಾರು ಬರೆಸುತ್ತಿದ್ದಾರೆ ಅನ್ನೋದು ತನಿಖೆ ಆಗಲಿ ಯಾವ ಸರ್ಕಾರ ಇದ್ದರೂ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕುತ್ತಾರೆ ಎಂದು ತಿಳಿಸಿದರು.