ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರ ಶವ ಪತ್ತೆ

ಬೆಂಗಳೂರು : ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರ ಶವ ಪತ್ತೆಯಾಗಿದೆ.

ಮಹದೇವಯ್ಯ ಅವರ ಕಾರು ಇಂದು ಬೆಳಗ್ಗೆ ಪಟ್ಟೆಯಾಗಿತ್ತು.ಅದರಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಅನುಮಾನ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಹದೇವಯ್ಯ ಅವರು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ಚಾಮರಾಜನಗರದ ರಾಮಾಪುರದ ನಿರ್ಜನ ಪ್ರದೇಶವೊಂದರಲ್ಲಿ ಮಹದೇವಯ್ಯ ಅವರ ಶವ ಪತ್ತೆಯಾಗಿದೆ.

ಹಂತಕರು ಮಹದೇವಯ್ಯ ಅವರನ್ನು ಕಾರಿನಲ್ಲೇ ಕರೆದುಕೊಂಡು ಚನ್ನಪಟ್ಟಣದಿಂದ ಚಾಮರಾಜನಗರ ಜಿಲ್ಲೆಗೆ ಬಂದಿದ್ದು, ನಂತರ ಅದೇ ಮಾರ್ಗದ ಅಂಗಡಿಯಲ್ಲಿ ನೀರಿನ ಬಾಟ್ಲಿ ಖರೀದಿ ಮಾಡಿರುವ ಅನುಮಾನ ಹುಟ್ಟಿತ್ತು. ಇದಾದ ಬಳಿಕ ಹನೂರು ತಾಲೂಕಿ ನಾಲಾರೋಡ್ ಬಳಿಗೆ ಬಂದು ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಸಾಕಿ, ಬೆಳಗ್ಗೆ 5 ಗಂಟೆಗೆ ಹನೂರಿನ ರಾಮಾಪುರದಲ್ಲಿ ಕಾರು ನಿಲ್ಲಿಸಿರುವ ಹಂತಕರು, ಡಿ.2ರ ಬೆಳಗ್ಗೆ 5.15ಕ್ಕೆ ರಾಮಾಪುರದ ಮುಖ್ಯರಸ್ತೆಯಲ್ಲಿ ಟೀ ಕುಡಿದು ಹೋಗಿರುವ ಶಂಕೆ ವ್ಯಕ್ತವಾಗಿದೆ.

Latest Indian news

Popular Stories