
Featured StoryBidar
ಅಪಘಾತ ತಡೆಗಟ್ಟಲು ವಿಭಿನ್ನ ಜಾಗೃತಿಗೆ ಮುಂದಾದ ಬೀದರ್ ಡಿಸಿ, ಎಸ್ಪಿ.
ಬೀದರ್ : ಅಪ್ರಾಪ್ತ ಮಕ್ಕಳಿಗೆ ವೆಹಿಕಲ್ ನೀಡದಂತೆ ಸೈಕಲ್ ಮೇಲೆ ಜಾಗೃತಿ ರ್ಯಾಲಿ ನಡೆಸಿದ ಜಿಲ್ಲಾಧಿಕಾರಿ ಗೋವಿದರೆಡ್ಡಿ ಹಾಗೂ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಇಂದು ಜಿಲ್ಲಾಧಿಕಾರಿ ನಿವಾಸದಿಂದ ಕಚೇರಿವರೆಗೆ ಸೈಕಲ್ ರ್ಯಾಲಿ ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಿ ಗಮನ ಸೆಳೆದಿದ್ದಾರೆ
ಪೋಷಕರು 18 ವರ್ಷದೊಳಗಿನ ಮಕ್ಕಳಿಗೆ ಬೈಕ್ ನೀಡದೆ,ಅಪ್ರಾಪ್ತ ವಯಸ್ಕರು ಮೋಟಾರ್ ವೆಹಿಕಲ್ ಚಾಲನೆ ಮಾಡೋದರಿಂದಾಗುವ ಅಪಘಾತ ತಪ್ಪಿಸಲು ಎಲ್ಲರೂ ಕೈ ಜೋಡಿಸಬೇಕೆಂದು ನಿವಾಸದಿಂದ ಸೈಕಲ್ ಮೂಲಕ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಜಾಗೃತಿಯನ್ನು ಮೂಡಿಸಿದ್ದಾರೆ ,ಅದು ಅಲ್ಲದೇ ವಾರದಲ್ಲಿ ಒಂದು ಸಲ ಸರ್ಕಾರಿ ಅಧಿಕಾರಿಗಳು ಸೈಕಲ್ ಮೂಲಕ ಕಚೇರಿಗೆ ಆಗಮಿಸುವಂತೆ ಡಿಸಿ ಮನವಿಯನ್ನು ಮಾಡಿದ್ದಾರೆ
ಹನಮಂತ ದೇಶಮುಖ
THG BIDAR




