ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಗೋವಿಂದಾ ಬಾಬು ಪೂಜಾರಿ ವಿರುದ್ಧ ಇಡಿಗೆ ದೂರು

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಅಂಡ್ ಗ್ಯಾಂಗ್ ನಿಂದ ವಂಚನೆ ಪ್ರಕರಣಕ್ಕೆ (Fraud Case) ಸಂಬಂಧಿಸಿದಂತೆ ದೂರುದಾರ ಗೋವಿಂದ ಪೂಜಾರಿಯ ವಿರುದ್ಧ ಕೂಡ ದೂರು ನೀಡಲಾಗಿದೆ.

ಗೋವಿಂದ ಪೂಜಾರಿ ವಿರುದ್ದ ಇಡಿಗೆ (ED) ವಕೀಲ ನಟರಾಜ ಶರ್ಮಾ ಎಂಬುವರು ದೂರು ನೀಡಿದ್ದಾರೆ. 5 ಕೋಟಿ ರೂಪಾಯಿ ಅಕ್ರಮ ವ್ಯವಹಾರ (Illegal Business) ನಡೆಸಲಾಗಿದೆ. ಹವಾಲ ಹಣವನ್ನು ಬಳಸಿ ಗೋವಿಂದ ಪೂಜಾರಿ ಹಣ ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ (Investigation) ನಡೆಸುವಂತೆ ಮನವಿ ಮಾಡಿದ್ದಾರೆ.

ಇಡಿಗೆ ದೂರು ನೀಡಿದ ಬಳಿಕ ಮಾತನಾಡಿದ ವಕೀಲ ನಟರಾಜ ಶರ್ಮಾ ಅವರು, ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಿರುದ್ಧ ಕೇಳಿ ಬಂದಿರುವ ವಂಚನೆ ಆರೋಪ ಪ್ರಕರಣ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಘಟನೆ. ಆದರೆ ಗೋವಿಂದ ಪೂಜಾರಿ ನೀಡಿರುವ ದೂರು ತೆಗೆದುಕೊಂಡರೆ ಇದು ಪ್ರಜಾಪ್ರಭುತ್ವದ ವಿರುದ್ಧ ನಡೆದ ಕ್ರೈಂ. ಚೈತ್ರಾ ವಿರುದ್ಧ ವಂಚನೆ ಪ್ರಕರಣ ಅಷ್ಟೇ, ಆದರೆ ಪೂಜಾರಿ ಮಾಡಿರುವುದು ದೇಶದ್ರೋಹದ ಕೆಲಸ, ಸಮಾಜಘಾತುಕ ಕೆಲಸ ಅಂತ ಹೇಳಬಹುದು.

ಗೋವಿಂದ ಪೂಜಾರಿ ಅವರೇ ನೀಡಿರುವ ದೂರಿನ ಪ್ರಕಾರ, ಮೂರು ಕೋಟಿ ರೂಪಾಯಿಯನ್ನು ನೀಡಲು 10 ರೂಪಾಯಿ ಬಳಕೆ ಮಾಡಿದ್ದಾರೆ. 10 ರೂಪಾಯಿ ನೋಟು ಕೊಟ್ಟ ಬಳಿಕವೇ ದುಡ್ಡು ನೀಡಿದ್ದಾಗಿ ಅವರೇ ದೂರಿನಲ್ಲಿ ಹೇಳಿದ್ದಾರೆ. ಇದರಿಂದ ಕ್ಲೀನ್​ ಆಗಿ ಗೊತ್ತಾಗುತ್ತೆ, ಇದರಲ್ಲಿ ಹವಾಲಾ ಹಣ ವರ್ಗಾವಣೆ ಆಗಿದೆ ಅಂತ. ಸಿಸಿಬಿ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡಬೇಕಿತ್ತು. ಅವರ ಮೇಲೆಯೇ ಸ್ವಯಂ ದೂರು ದಾಖಲು ಮಾಡಿಕೊಳ್ಳಬೇಕಿತ್ತು. ಆದ್ದರಿಂದ ನಾವು ಇವತ್ತು ಇಡಿಗೆ ದೂರು ಸಲ್ಲಿಕೆ ಮಾಡಿದ್ದೇವೆ ಎಂದು ವಕೀಲ ತಿಳಿಸಿದ್ದಾರೆ.

 

Latest Indian news

Popular Stories