ಕಾಪು: ತಿಂಗಳ ಹಿಂದೆ ಆಗುಂಬೆ ಘಟ್ ಸಮೀಪ ನಡೆದ ಅನೈತಿಕ ಗೂಂಡಾಗಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಈ ಸಂಬಂಧ ಯುವತಿಯ ಸಹೋದರ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪುವಿನ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರು ಒಂದು ತಿಂಗಳ ಹಿಂದೆ ಬೈಕ್ ನಲ್ಲಿ ಆಗುಂಬೆಯ ಜಲಪಾತಕ್ಕೆ ಸುತ್ತಾಡಲು ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವಿದ್ಯಾರ್ಥಿಗಳ ಬೈಕ್ ಅನ್ನು ತಡೆದ ದುಷ್ಕರ್ಮಿಗಳು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಅನೈತಿಕ ಪೊಲೀಸ್’ಗಿರಿ ನಡೆಸಿದ್ದಾರೆ.
ಇದೇ ವೇಳೆ ಸಂಘ ಪರಿವಾರದ ಕಾರ್ಯಕರ್ತರು ವಿದ್ಯಾರ್ಥಿ, ವಿದ್ಯಾರ್ಥಿನಿಯ ವಿಡಿಯೋವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಣ ಮಾಡಿದ್ದರು. ಇದೀಗ ಈ ವಿಡಿಯೋವನ್ನು ತಿಂಗಳ ಬಳಿಕ ಸಾಮಾಜಿಕ
ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರಿಂದ ಯುವತಿಯ ಸಹೋದರ ದೂರು ನೀಡಿದ್ದಾರೆ.
ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.ಬೈಕ್‌ನಲ್ಲಿ ತೆರಳುತ್ತಿದ್ದ ಭಿನ್ನ ಸಮುದಾಯದ ಹುಡುಗ-ಹುಡುಗಿಯನ್ನು ಕೆಲವರು ತಡೆದು ವಿಡಿಯೋ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ
ಸಹೋದರನ ದೂರಿನ ಮೇರೆಗೆ ಕಲಂ 143 147 341 505(2) 354D r/w 149 IPC. ಪ್ರಕರಣ
ದಾಖಲಾಗಿದೆ. ಈ ಘಟನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.