ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಮಾಜ ವಿಜ್ಞಾನದಲ್ಲಿ 9 ವಿದ್ಯಾರ್ಥಿಗಳು ಡಿಬಾರ್

ಬೆಂಗಳೂರು :ರಾಜ್ಯಾದ್ಯಂತ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷಾ ಕೊಠಡಿಯಲ್ಲಿ ನಕಲು ಮಾಡುತ್ತಿದ್ದ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

ಧಾರವಾಡದಲ್ಲಿ 4, ರಾಯಚೂರಿನಲ್ಲಿ 3, ಕಲಬುರಗಿ ಮತ್ತು ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ತಲಾ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.

ಬೆಂಗಳೂರು ನಗರದ ಹೊನ್ನಗನಹಟ್ಟಿ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿಯು ಚೀಟಿ ತಂದು ಬರೆಯುತ್ತಿದ್ದನ್ನು ಪತ್ತೆ ಹಚ್ಚಿರುವ ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕೇಂದ್ರದ ಅಧೀಕ್ಷಕರ ಗಮನಕ್ಕೆ ತಂದು ಡಿಬಾರ್ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಡಿಡಿಪಿಐ ತಿಳಿಸಿದ್ದಾರೆ.

ಹಾಗೆಯೇ ಜೀವರ್ಗಿ ಜಿಪಿಎಚ್‌ಎಸ್, ಮಾನ್ವಿ ಜಿಪಿಎಸ್-3 ಶಾಲೆ, ಧಾರವಾಡದ ಜಿವಿ ಜೋಶಿ ರೋಟರಿ ಇಂಗ್ಲಿಷ್ ಸ್ಕೂಲ್‌ನಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳು ಮತ್ತು ಹುಬ್ಬಳ್ಳಿಯ ಅಂಜುಮಾನ್ ಉರ್ದು ಶಾಲೆಯಲ್ಲಿ ಮೊಬೈಲ್ ಬಳಸುತ್ತಿದ್ದದ್ದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಡಿಬಾರ್ ಮಾಡಲಾಗಿದೆ.

ಸಮಾಜ ವಿಜ್ಞಾನ ವಿಷಯಕ್ಕೆ 8,41,120 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 8,27,773 (ಶೇ.98.4) ಮಂದಿ ಹಾಜರಾಗಿದ್ದು, 13,347 ಮಂದಿ ಗೈರು ಹಾಜರಾಗಿದ್ದಾರೆ.

Latest Indian news

Popular Stories