ಬೆಂಗಳೂರು: ಕಾಡಾನೆ ದಳಿಗೆ ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು ಹಾಗೂ ಮೂರು ಹಸುಗಳು ಮೃತಪಟ್ಟಿರುವ ದಾರುಣ ಘಟನೆ ರಾಜ್ಯದ ಗಡಿ ಭಾಗದ ಆನೆಕಲ್ ಬಳಿಯ ಅಣ್ಣಿಯಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಯೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು, ಮೂರು ಹಸುಗಳನ್ನು ಬಲಿ ಪಡೆದಿದೆ.
ಅಣ್ಣಿಯಾಳ ಗ್ರಾಮದ ಆಶಾ ಕಾರ್ಯಕರ್ತೆ ವಸಂತ (37) ಹಾಗೂ ದಾಸರಪಲ್ಲಿ ನಿವಾಸಿ ಅಶ್ವತ್ಥಮ್ಮ (40) ಮೃತ ಮಹಿಳೆಯರು.
ಕಳೆದ ಮೂರ್ನಾಲ್ಕು ದಿನಗಳಿಂದ ಗುಮ್ಮಳಾಪುರ, ಅಣ್ಣಿಯಾಳು, ತಳಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಕಾಡಾನೆಗಳು ಬೀಡುಇ ಬಿಟ್ಟಿದ್ದು, ಅಣ್ಣಿಯಾಳು ಗ್ರಾಮಸ್ಥರು ಕಾಡಾನೆ ಓಡಿಸಲು ಮುಂದಾಗಿದ್ದಾರೆ. ಈ ವೇಳೆ ತೋಟಕ್ಕೆ ನುಗ್ಗಿದ ಕಾಡಾನೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿದೆ. ಅಲ್ಲದೇ ಮೂರು ಹಸುಗಳ ಮೇಲು ದಾಳಿ ನಡೆಸಿದೆ.