ಹಾವೇರಿ : ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳು ಜಾರಿ ಆಗುವುದರಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ನಮ್ಮ ವಿರೋಧಿಗಳು ಹೇಳಿದ್ದರು. ಆದರೆ ಇದೀಗ ರಾಜ್ಯ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಾವೇರಿಯಲ್ಲಿ 411 ಕೋಟಿಯರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಈ 5 ಗ್ಯಾರಂಟಿ ಗಳಿಂದ ರಾಜ್ಯದ ಜನತೆ ಸಂತೋಷವಾಗಿದ್ದಾರೆ.
ಅಲ್ಲದೆ ಮಹಿಳೆಯರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಆದರೆ ವಿರೋಧಿಗಳು ರಾಜ್ಯದಿವಾಳೆ ಆಗುತ್ತದೆ ಎಂದು ಹೇಳಿದರು ಆದರೆ ಇದೀಗ ರಾಜ್ಯ ಸುಭದ್ರವಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ, ಆಶಾಕಿರಣ ಯೋಜನೆ ಜಾರಿ ಮಾಡಲಾಗಿದ್ದು, ದೃಷ್ಟಿ ದೋಷ ಇರುವ ಜನರಿಗೆ ಉಚಿತ ಕನ್ನಡಕ ಕೊಡುತ್ತಿದ್ದೇವೆ. ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆ ನೀಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.