Bengaluru UrbanFeatured Story

ಬೆಂಗಳೂರಿನ ಪುಲಕೇಶಿನಗರ ಠಾಣೆ ‘ಇನ್ಸ್ ಪೆಕ್ಟರ್ ಸೋಮಶೇಖರ್’ ಅಮಾನತು

ಬೆಂಗಳೂರು: ನಗರದ ಪುಲಕೇಶಿನಗರದ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್ ಅವರನ್ನು ಕರ್ತವ್ಯ ಲೋಪ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ.ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶಿಸಿದ್ದಾರೆ.

ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್ ಎಂಬುದಾಗಿ ಪುಲಕೇಶಿನಗರ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್ ಖಾಸಗಿ ದೂರು ಒಂದನ್ನು ದಾಖಲಿಸಿಕೊಂಡಿರಲಿಲ್ಲ.ಅಲ್ಲದೇ ಆರು ತಿಂಗಳಿನಿಂದ ಎಫ್‌ಐಆರ್ ಎಫ್‌ಐಆರ್ ದಾಖಲಿಸದೇ ಬಾಕಿ ಉಳಿಸಿಕೊಂಡಿದ್ದರು.

ಇದಷ್ಟೇ ಅಲ್ಲದೇ ದರೋಡೆ ಪ್ರಕರಣದಲ್ಲೂ ಎಫ್‌ಐಆರ್ ದಾಖಲಿಸೋದಕ್ಕೆ ಮೀನಾ ಮೇಷ ಎಣಿಸಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕರ್ತವ್ಯ ಲೋಪ ಎಸಗಿದಂತ ಪುಲಕೇಶಿ ನಗರ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್ ಅವರನ್ನು ಅಮಾನುತುಗೊಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button