Featured StoryState News

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ನಮ್ಮ ಕಾರ್ಗೋ- “ಟ್ರಕ್ ಸೇವೆ “

ಬೆಂಗಳೂರು ಇಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ “ನಮ್ಮ ಕಾರ್ಗೋ-ಟ್ರಕ್ ಸೇವೆ” ಯೋಜನೆಗೆ ಚಾಲನೆ ನೀಡಿ 20 ನೂತನ ಟ್ರಕ್ಕುಗಳಿಗೆ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಸಚಿವರು, ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್ಕುಗಳನ್ನು , ಒಂದು ವರ್ಷದೊಳಗಾಗಿ 500 ಟ್ರಕ್ಕುಗಳನ್ನು ಸೇರ್ಪಡೆ ಮಾಡಲಾಗುವುದು ಮತ್ತು ಪ್ರಸಕ್ತ ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ಈ ನಮ್ಮ‌ಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ , ಬಸ್ ನಿಲ್ದಾಣದಲ್ಲಿರುವ ಸ್ಥಳವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲಾಗುವುದೆಂದು ತಿಳಿಸಿದರು.

ನಿಗಮದ ಪ್ರಸಕ್ತ ಕಾರ್ಯಾಚರಣೆಯ ಅಂಕಿಅಂಶಗಳ ವಿವರವು ಕೆಳಗಿನಂತಿವೆ.

 ವಿಭಾಗಗಳು – 16
 ಘಟಕಗಳು – 83
 ಬಸ್ಸು ನಿಲ್ದಾಣಗಳು – 174
 ಸಾರಿಗೆ ಸೇವೆಗಳು – 7649
 ಒಟ್ಟು ಬಸ್ಸುಗಳು – 8355
 ಪ್ರತಿನಿತ್ಯ ಕಾರ್ಯಾಚರಿಸಿರುವ ಕಿ.ಮೀ – 26.93 ಲಕ್ಷ ಕಿಮೀ
 ಪ್ರತಿನಿತ್ಯ ಪ್ರಯಾಣಿಸಿರುವ ಅಂದಾಜು ಒಟ್ಟು ಪ್ರಯಾಣಿಕರ ಸಂಖ್ಯೆ – 32.48 ಲಕ್ಷ,
 ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಸಂಖ್ಯೆ -18.41 ಲಕ್ಷ,
 ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಟಿಕೇಟ್ ಮೊತ್ತ- 5.49 ಕೋಟಿ,
 ಒಟ್ಟು ಸಿಬ್ಬಂದಿ – 33932

ಇಂದು ನಿಗಮದ ವತಿಯಿಂದ ನೂತನ ನಮ್ಮ ಕಾರ್ಗೋ ಟ್ರಕ್ ಸೇವೆಗಳಿಗೆ 20 ಸರಕು ಸಾಗಣೆ ವಾಹನಗಳ ಮೂಲಕ ಚಾಲನೆ ನೀಡಲಾಗುತ್ತಿದೆ.

ಇಂದು ನಿಗಮವು ಮೇ|| ಕೆ.ಎಂ.ಎಸ್ ಕೋಚ್ ಬಿಲ್ಡ್ರ್ಸ್ ಪ್ರೈವೆಟ್ ಲಿಮಿಟೆಡ್ ರವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಎರಡು ತಿಂಗಳ ಅವಧಿಗೆ ಹಾಗೂ ಎಸ್.ಎಂ ಕಣ್ಣಪ್ಪ ಪ್ರೈವೆಟ್ ಲಿಮಿಟೆಡ್ ರವರಿಗೆ ತನ್ನ ಟ್ರಕ್ಕ್ಅನ್ನು ಒಂದು ತಿಂಗಳ ಅವಧಿಗೆ ಬಾಡಿಗೆಗೆ ನೀಡಿ ಸಾರಿಗೆ ವಲಯದಲ್ಲಿ ಮಹತ್ತರ ಪ್ರಗತಿಯ ಹೆಜ್ಜೆಇರಿಸಿದೆ

ನಿಗಮವು ಸಾರ್ವಜನಿಕ ಸಾರಿಗೆಯಲ್ಲಿ ತನ್ನ ವಹಿವಾಟನ್ನು ಮತ್ತಷ್ಟು ಉತ್ತಮಪಡಿಸಲು 2021 ರಲ್ಲಿ ನಮ್ಮ ಕಾರ್ಗೊ ಹೆಸರಿನಿಂದ ಲಾಜಿಸ್ಟಿಕ್ಸ್ ಸೇವೆಯನ್ನು ಪ್ರಾರಂಭಿಸಿರುತ್ತದೆ. ಇದರಡಿಯಲ್ಲಿ ನಿಗಮದ ಮಾರ್ಗಗಳುಬ

ಕಾರ್ಯಾಚರಣೆಯಲ್ಲಿರುವ ಸ್ಥಳಗಳಿಗೆ ನಿಗಮದ ಬಸ್ಸುಗಳಿಂದ ಪಾರ್ಸಲ್‌ಗಳನ್ನು ಸಾಗಿಸಲಾಗುತ್ತಿದೆ.

ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ಅಭಿವೃದ್ಧಿಪಡಿಸುವ ಸಲುವಾಗಿ ಜಿಪಿಎಸ್ ಅಳವಡಿಕೆಯೊಂದಿಗೆ ನವೀನ ಬ್ರಾಂಡ್ “ನಮ್ಮ ಕಾರ್ಗೋ-ಟ್ರಕ್ ಸೇವೆ” ಗಳನ್ನು ಈಗ ಪರಿಚಯಿಸುತ್ತಿದೆ.

ಈ ನೂತನ ಸೇವೆಯ ಪ್ರಮುಖ ಅಂಶಗಳು ಕೆಳಕಂಡಂತಿದೆ:
1. ಗ್ರಾಹಕರ ಸರಕುಗಳನ್ನು ರಾಜ್ಯ ವ್ಯಾಪ್ತಿಯಲ್ಲಿ ಸುರಕ್ಷಿತ, ವೇಗ ಹಾಗೂ ವಿಶ್ವಾಸಾರ್ಹವಾಗಿ ಸಾಗಿಸಲಾಗುವುದು.

2. ಈ ಟ್ರಕ್‌ಗಳು ಮುಚ್ಚಲಾದ ಕಂಟೈನರ್ ಮಾದರಿಯ 14ಅ *7ಅ *7ಅ ಅಳತೆಯದ್ದಾಗಿರುತ್ತದೆ.

3. ನಿಗಮವು ಬಲವಾದ ನೆಟ್‌ವರ್ಕ್ ವ್ಯವಸ್ಥೆಯನ್ನು ಹೊಂದಿದ್ದು, ಟ್ರಕ್ ಟ್ರ್ಯಾಕಿಂಗ್ ಸೌಲಭ್ಯದೊಂದಿಗೆ ವಿಶ್ವಾಸಾರ್ಹ ಸಿಬ್ಬಂದಿಗಳ ಮುಖೇನ ಗ್ರಾಹಕರ ಸರಕುಗಳನ್ನು ಸುರಕ್ಷಿತವಾಗಿ ಸರಿಯಾದ ಸಮಯಕ್ಕೆ ಸಾಗಿಸಲಿದೆ.

4. ಈ ನೂತನ ಸರಕು ಸಾಗಣೆ ವ್ಯವಸ್ಥೆಯನ್ನು ಆಸಕ್ತ ಗ್ರಾಹಕರಿಗೆ ಕರಾರು ಒಪ್ಪಂದಕ್ಕೆ ಒಳಪಟ್ಟು ಒದಗಿಸಲಿದೆ.

5. ಈ ಲಾಜಿಸ್ಟಿಕ್ ಸೇವೆಗಳಿಂದ ನಿಗಮ ಹಾಗೂ ಸೌಲಭ್ಯ ಪಡೆಯುವ ಸಂಸ್ಥೆಗಳ ನಡುವೆ ಒಡನಾಟ ವರ್ಧನೆಯಾಗಲಿದೆ.

6. ಈ ಟ್ರಕ್ ವಾಹನದ ವೈಶಿಷ್ಟ್ಯಗಳು ಕೆಳಕಂಡಂತಿರುತ್ತದೆ:
ಮಾದರಿ ಟಾಟಾ 1112LPT
ಸರಕು ಸಾಗಣೆ ಸಾಮರ್ಥ್ಯ 06 ಟನ್
ಕಂಟೈನರ್ ಎತ್ತರ
2120 ಮಿಮಿ
ಕಂಟೈನರ್ ಅಗಲ
2228 ಮಿಮಿ
ಕಂಟೈನರ್ ಉದ್ದ
4439 ಮಿಮಿ
ಕವಚ ಮುಚ್ಚಲಾದ ಮಾದರಿ

ಈ ನೂತನ ಟ್ರಕ್ ಸೇವೆಗಳಿಗೆ ನಿಗದಿಪಡಿಸಿರುವ ದರದ ವಿವರಗಳು:
ಕಿ.ಮೀ ಪ್ರತಿ ಕಿ.ಮೀ ದರ ಕನಿಷ್ಠ ಕಿ.ಮೀ ಅವಧಿ ಕನಿಷ್ಠ ದರ
01 ರಿಂದ 100 ಕಿ.ಮೀ ವರೆಗೆ ರೂ.50/- 100 ಕಿ.ಮೀ ಗರಿಷ್ಠ 12 ಗಂಟೆ ರೂ.5000/-
01 ರಿಂದ 200 ಕಿ.ಮೀ ವರೆಗೆ ರೂ.40/- 200 ಕಿ.ಮೀ 24 ಗಂಟೆ
(ನಿರ್ಗಮನದ ಸಮಯದಿಂದ 24 ಗಂಟೆ ಅವಧಿ) ರೂ. 8000/-
200 ಕಿ.ಮೀ ಮೇಲ್ಪಟ್ಟ ಹೆಚ್ಚುವರಿ ಕಿ.ಮೀ ಗೆ ರೂ.35/- ಆಚರಣೆ ಕಿ.ಮೀ

ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಯಿಂದ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಗೆ ಲಭ್ಯವಿರುತ್ತದೆ.

ನಿಗಮವು ಗ್ರಾಹಕರುಗಳ ಅಗತ್ಯತೆಗನುಗುಣವಾಗಿ ಟ್ರಕ್ ಸೇವೆ ಒದಗಿಸಲಿದ್ದು, ಇಚ್ಚೆಯುಳ್ಳ ಆಸಕ್ತ ಗ್ರಾಹಕರು ತಮ್ಮ ಅಗತ್ಯತೆಗಳ ಮಾಹಿತಿ / ವಿವರಗಳನ್ನು ಒದಗಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾಲ್ ಸೆಂಟರ್ ಸಂಖ್ಯೆ 080-26252625
ಇ-ಮೇಲ್ ವಿಳಾಸ [email protected]

ಈ ಸಮಾರಂಭದಲ್ಲಿ ಶ್ರೀ. ವಿ.ಅನ್ಬುಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕ ರಾ ರ ಸಾ ನಿಗಮ, ಡಾ. ನಂದಿನಿ ದೇವಿ. ಕೆ, ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತೆ), ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button