Bengaluru UrbanFeatured Story

ಬೆಂಗಳೂರಿನ ಪ್ರತಿಷ್ಠಿತ ‘ಮಂತ್ರಿ ಮಾಲ್’ಗೆ BBMP ಬೀಗ

ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡಿರೋ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಹಾಗೂ ಈ ಹಿಂದೆ ಅನೇಕ ಬಾರಿ ತೆರಿಗೆ ಬಾಕಿ ಉಳಿಸಿಕೊಂಡಿದ್ದನ್ನು ಕಟ್ಟುವಂತೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬಿಬಿಎಂಪಿ ಸೂಚಿಸಿತ್ತು. ತೆರಿಗೆ ಬಾಕಿ ಕಟ್ಟದ ಸಂದರ್ಭದಲ್ಲಿ ಬೀಗ ಹಾಕಲಾಗಿತ್ತು

ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನಲೆಯಲ್ಲಿ ಮಂತ್ರಿಮಾಲ್ ನ ಪ್ರಮುಖ ದ್ವಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿ ಲಾಕ್ ಮಾಡಿದ್ದಾರೆ.
ಅಂದಹಾಗೇ ಮಂತ್ರಿ ಮಾಲ್ ನಿಂದ ಬಿಬಿಎಂಪಿಗೆ 51 ಕೋಟಿ ತೆರಿಗೆ ಕಟ್ಟೋದು ಬಾಕಿ ಉಳಿಸಿಕೊಂಡಿತ್ತು. ಅದು ಕೂಡ 2019-20ರವೆರೆಗೆ ತೆರಿಗೆ ಬಾಕಿಯನ್ನು ಉಳಿಸಿಕೊಳ್ಳಲಾಗಿತ್ತು.

ಈ ಹಿನ್ನಲೆಯಲ್ಲಿ ಮಾಲ್ ಆಡಳಿತ ಮಂಡಳಿಗೆ ಅನೇಕ ಬಾರಿ ಬಿಬಿಎಂಪಿಯಿಂದ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು. ಆದ್ರೇ ಇದಕ್ಕೆ ಯಾವುದೇ ಉತ್ತರವನ್ನು ಮಂತ್ರಿ ಮಾಲ್ ನೀಡಿರಲಿಲ್ಲ.
ಈ ಎಲ್ಲಾ ಕಾರಣದಿಂದಾಗಿ ಇಂದು ಬಿಬಿಎಂಪಿಯ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ನ ಪ್ರಮುಖ ದ್ವಾರಕ್ಕೆ ಬೀಗ ಹಾಕಿ ಲಾಕ್ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button