ಬೆಂಗಳೂರು : ಕಾರು ಹರಿದು 3 ವರ್ಷದ ಕಂದಮ್ಮ ಮೃತ್ಯು

ಬೆಂಗಳೂರು: ಅಪಾರ್ಟ್ಮೆಂಟ್ ಮುಂದೆ ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಸವನಹಳ್ಳಿಯಲ್ಲಿ ನಡೆದಿದೆ.

ಈ ಘಟನೆ ಡಿಸೆಂಬರ್ 9 ರಂದು ನಡೆದಿದ್ದು, ಮಗುವಿನ ತಂದೆ ದೂರು ದಾಖಲಿಸಿದ ನಂತರ ಪೊಲೀಸರು ಅಪಾರ್ಟ್ಮೆಂಟ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಬೆಳಕಿಗೆ ಬಂದಿದೆ.ಮೃತಳನ್ನು ನೇಪಾಳ ಮೂಲದ ಜೋಗ್ ಜಾಥರ್ ಅವರ ಪುತ್ರಿ ಅರ್ಬಿನಾ ಎಂದು ಗುರುತಿಸಲಾಗಿದ್ದು, ಇವರು ನಗರದ ಸಮೃದ್ಧಿ ಅಪಾರ್ಟ್ಮೆಂಟ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

ಅಪಾರ್ಟ್ಮೆಂಟ್ ನ ಗೇಟ್ ಬಳಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬಿಳಿ ಬಣ್ಣದ ಮಹೀಂದ್ರಾ ಎಕ್ಸ್ಯುವಿ 700 ಕಾರು ಹರಿದಿದ್ದು, ಈ ಸಂಬಂಧ ಸುಮನ್ ಸಿ ಕೇಶವ ದಾಸ್ ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಚಾಲಕ ಬಾಲಕಿಯನ್ನು ಗಮನಿಸದೇ ಕಾರು ಓಡಿಸಿದ್ದಾನೆ ಎಂದು ವೈಟ್ ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories