ಬೆಂಗಳೂರು :ಅಪಾರ್ಟ್ ಮೆಂಟ್ ನಿಂದ ಕಾಲು ಜಾರಿ ಬಿದ್ದು ಗೃಹಿಣಿ ಮೃತ್ಯು

ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಕಾಲು ಜಾರಿ ಕೆಳಗೆ ಬಿದ್ದು ಗೃಹಿಣಿ ಸಾವನ್ನಪ್ಪಿದ್ದಾರೆ.ಮನೆ ಕ್ಲೀನ್ ಮಾಡುವ ವೇಳೆ ಈ ಅವಘಡ ಸಂಭವಿಸಿದೆ.

ಬೆಂಗಳೂರಿನ ದೊಡ್ಡಬನಹಳ್ಳಿಯಲ್ಲಿರುವಂತ ಅಪಾರ್ಟ್ ಮೆಂಟ್ ಒಂದರಲ್ಲಿನ ಫ್ಲ್ಯಾಟ್ ನಲ್ಲಿ, ಮನೆಯ ಮುಂಭಾಗದಲ್ಲಿದ್ದಂತ ಶೂ ಬಾಕ್ಸ್ ಗಳನ್ನು ಕ್ಲೀನ್ ಮಾಡುತ್ತಿದ್ದಂತ ಸಂದರ್ಭದಲ್ಲಿ ಖುಷ್ಪೂ ತ್ರಿವೇದಿ ಎಂಬುವರು ಆಯತಪ್ಪಿ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಹೀಗೆ ಬಿದ್ದಂತ ಖುಷ್ಬೂ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಖುಷ್ಬೂ ತ್ರಿವೇದಿ(31) ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಕಾಡುಗೋಡಿ ದೊಡ್ಡಬನಹಳ್ಳಿ ಬಿಡಿಎ ವಿಂಧ್ಯಗಿರಿ ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಬಿದ್ದು ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದ್ದಾರೆ.ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories