ಉಳ್ಳಾಲ: ಸಮುದ್ರ ಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ

ಮಂಗಳೂರು: ಸಮುದ್ರದಲ್ಲಿ ಈಜಾಡಲು ಇಳಿದು ನೀರುಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಆದಿತ್ಯವಾರ ಪತ್ತೆಯಾಗಿದೆ.

ಸೋಮೇಶ್ವರ ಖಾಸಗಿ ಕಾಲೇಜಿನ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಯಶ್ವಿತ್(17) ಹಾಗೂ ಯುವರಾಜ್(17) ತಮ್ಮ ಇತರ ನಾಲ್ಕು ಮಂದಿ ಸ್ನೇಹಿತರೊಂದಿಗೆ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಬಳಿಕ ಅವರೆಲ್ಲಾ ಆಟವಾಡಲು ನೀರಿಗಿಳಿದಿದ್ದು ಯಶ್ವಿತ್ ಮತ್ತು ಯುವರಾಜ್ ನೀರು ಪಾಲಾಗಿದ್ದರು.

ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಈಜು ತಜ್ಞರು ತಡರಾತ್ರಿ ವರೆಗೆ ಕಾರ್ಯಾಚರಣೆ ನಡೆಸಿದ್ದರು.
ರವಿವಾರ ಬೆಳಗ್ಗೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ದೇರಳಕಟ್ಟೆಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Latest Indian news

Popular Stories