ಲೀಲಾವತಿ ಅವರ ಹೆಸರು ಅಜರಾಮರವಾಗಿರಲು ಸರ್ಕಾರ ಏನು ಬೇಕಾದರೂ ಮಾಡಲು ಸಿದ್ಧ : ಡಿಕೆಶಿ

ಬೆಂಗಳೂರು: ಹಿರಿಯ ಖ್ಯಾತ ನಟಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಸಿಎಂ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.

ಇದೆ ವೇಳೆ ಸುದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಲೀಲಾವತಿಯವರು ಮಾಡಿರುವಂತಹ ಸಾಮಾಜಿಕ ಸೇವೆಗಳು ಕಾರ್ಯಗಳು ಅವರ ಹೆಸರು ಶಾಶ್ವತ ಉಳಿಯಲಿಕ್ಕೆ ನಾವು ಏನು ಮಾಡಬೇಕೋ ನಾವು ಮಾಡುತ್ತೇವೆ. ಪಶು ವೈದ್ಯಕೀಯ ಶಾಲೆ ಕುರಿತಂತೆ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಒಬ್ಬನೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಲೀಲಾವತಿ ಅವರು ಬಹಳ ಹೃದಯ ಶ್ರೀಮಂತಿಕೆಯಿಂದ ಇದ್ದವರು ನನಗಂತೂ ಸುಮಾರು 40 ವರ್ಷಗಳಿಂದ ನನಗೆ ಪರಿಚಯ. ಬಂಗಾರಪ್ಪ ಅವರ ಸಂಪುಟದಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ಚಿತ್ರಮಂದಿರಕ್ಕೆ ಪರ್ಮಿಷನ್ ಕೊಡಿಸೋಕೆ ನನ್ನತ್ರ ಬಂದಿದ್ದರು

ಒಂದು ಕೊನೆಯ ಭೇಟಿ ಎಂದರೆ ಎರಡು ವಾರದ ಮುಂಚೆ ಭೇಟಿಯಾಗಿದ್ದೆ. ಆಗ ಅವರು ನಾನು ಪಶು ವೈದ್ಯ ಶಾಲೆ ಕಟ್ಟಿದ್ದೇನೆ ಅದನ್ನು ಬಂದು ಉದ್ಘಾಟಿಸಬೇಕು ಅಂತ ಹೇಳಿದ್ದರು.

ಕೆಲವು ಸಾರಿ ಅದೃಷ್ಟವು ಬದಲಾವಣೆ ಆಗಬಹುದು ಆದರೆ ನಿರ್ಧಾರಗಳು ಬದಲಾವಣೆ ಆಗಬಾರದು ಎಂದು ನನಗೆ ಅನುಭವವಾಯಿತು. ಪಶು ವೈದ್ಯ ಉದ್ಘಾಟನೆಗೆ ಕರೆದಿದ್ದು ನನ್ನ ಅದೃಷ್ಟ.ನಾನು ಸೂಕ್ತ ಸಮಯದಲ್ಲಿ ಅವರು ಜೀವಂತ ಇರುವಾಗಲೇ ಉದ್ಘಾಟನೆ ಮಾಡಬೇಕೆಂದು ನಿರ್ಧಾರ ಮಾಡಿದ್ದು ನನಗೆ ದೊಡ್ಡ ಸಮಾಧಾನವಾಗಿದೆ ಎಂದು ತಿಳಿಸಿದರು.

Latest Indian news

Popular Stories