ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದುಬಿದ್ದ ಪರಿಣಾಮ ಮಗು ಸೇರಿ ಆರು ಮಹಿಳೆಯರು ಮೃತ್ಯು

ನವದೆಹಲಿ,ಡಿ.9- ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದುಬಿದ್ದ ಪರಿಣಾಮ ಒಂದು ಮಗು ಹಾಗೂ ಆರು ಮಹಿಳೆಯರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಹಾಗೂ 21 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಡ್ರಮ್ ಬಾರಿಸುವ ಕೆಲವು ಪುರುಷರ ಹಿಂದೆ ಮಹಿಳೆಯರ ಗುಂಪು ನಡೆಯುತ್ತಿರುವುದು ಕಂಡುಬರುತ್ತದೆ. ಅವರು ಹಳದಿ ಸಮಾರಂಭಕ್ಕೆ ಹೋಗುತ್ತಿದ್ದಾಗ ಗೊಡೆ ಕುಸಿದು ಬೀಳುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಣ್ಣ ಮನೆಗಳಿಂದ ಸುತ್ತುವರಿದ ಕಿರಿದಾದ ರಸ್ತೆಯಲ್ಲಿ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಮೆರವಣಿಗೆಯ ಹಿಂಭಾಗದಲ್ಲಿದ್ದವರ ಮೇಲೆ ಇದ್ದಕ್ಕಿದ್ದಂತೆ ಗೋಡೆಯೊಂದು ಬಿದ್ದಿತು.
ಧೂಳಿನ ಮೋಡವು ತ್ವರಿತವಾಗಿ ಬೀದಿಯನ್ನು ಆವರಿಸಿದ್ದರಿಂದ ಕೆಲ ಕಾಲ ಏನು ನಡೆಯಿತು ಎಂದು ಊಹಿಸಲು ಯಾರಿಗೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

Latest Indian news

Popular Stories