Bengaluru UrbanFeatured Story

ರಾಜ್ಯದಲ್ಲಿ 2023ರಲ್ಲಿ ‘ನಾಯಿ ಕಡಿತ’ ಪ್ರಕರಣ ಹೆಚ್ಚಳ: ಪ್ರತಿದಿನ ‘700 ಕೇಸ್’ ದಾಖಲು

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಳ ಕಂಡಿದ್ದು, ಆರೋಗ್ಯ ಇಲಾಖೆಯ ವರದಿಯಲ್ಲಿ 2023ರ ಜನವರಿ 1ರಿಂದ ನವೆಂಬರ್ ಅಂತ್ಯದವರೆಗೆ 2,15,403 ಲಕ್ಷ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎನ್ನುವ ಆಘಾತಕಾರಿ ಅಂಶ ಹೊರ ಬಿದಿದ್ದೆ. ಅಂದ ಹಾಗೇ ಇವರಲ್ಲಿ ಶೇ.10ರಷ್ಟು ಜನರು ಸಾಕು ನಾಯಿ ಕಡಿತಕ್ಕೆ ಒಳಗಾದರೆ, ಉಳಿದ ಶೇ.90ರಷ್ಟು ಮಂದಿ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

2021ರಲ್ಲಿ ಸುಮಾರು 1.59 ಲಕ್ಷ ಹಾಗೂ 2022ರಲ್ಲಿ ಸುಮಾರು 1.62 ಲಕ್ಷ ನಾಯಿ ಕಡಿತ ಪ್ರಕರಣದಾಖಲು ಆಗಿವೆ ಎನ್ನಲಾಗಿದೆ. ರಾಜ್ಯದಲ್ಲಿ ವಾರಕ್ಕೆ ಸರಾಸರಿ 5,080, ದಿನವೊಂದಕ್ಕೆ 700 ಡಾಗ್ ಬೈಟ್ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ.

ಆದಾಗ್ಯೂ, ರೇಬಿಸ್ ನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದೆ. ಈ ವರ್ಷ ಕರ್ನಾಟಕದಲ್ಲಿ ರೇಬಿಸ್ ನಿಂದ ಎರಡು ಸಾವುಗಳು ದೃಢಪಟ್ಟಿದ್ದರೆ, ಕಳೆದ ವರ್ಷ ಈ ಸಂಖ್ಯೆ 15 ರಷ್ಟಿತ್ತು. ಈ ವರ್ಷ ಬೆಂಗಳೂರಿನಲ್ಲಿ ರೇಬಿಸ್ ನಿಂದ ಯಾವುದೇ ಸಾವು ಸಂಭವಿಸಿಲ್ಲ ಎನ್ನಲಾಗಿದೆ. ಮಾರಣಾಂತಿಕ ರೇಬೀಸ್‌ನಿಂದ ಜೀವ ರಕ್ಷಿಸಬಲ್ಲ ಔಷಧಿಗಳಾದ ಆಯಂಟಿ ರೇಬಿಸ್ ವ್ಯಾಕ್ಸಿನ್ ಮತ್ತು ರೇಬಿಸ್ ಮ್ಯೂನೋಗ್ಲಾಬಿಲಿನ್‌ಗಳನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವಂತೆ ಕ್ರಮ ಕೈಗೊಳ್ಳಲು ಇತ್ತೀಚೆಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button