Bengaluru UrbanFeatured Story

ವನ್ಯಜೀವಿ’ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು 3 ತಿಂಗಳು ಮಾತ್ರ ಕಾಲಾವಕಾಶ : ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ವನ್ಯಜೀವಿ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು 3 ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಇಂದು ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿದರು.ವನ್ಯಜೀವಿ ವಸ್ತು ವಾಪಸ್ ಕೊಡಲು ಕೊನೇ ಅವಕಾಶ ಕೊಡಲು ತೀರ್ಮಾನ ಮಾಡಲಾಗಿದೆ.

ಪ್ರಾಣಿ ಅಂಗಾಂಗ ಹಿಂತಿರುಗಿಸಲು 3 ತಿಂಗಳು ಸಮಯ ಕೊಡಲು ತೀರ್ಮಾನ ಆಗಿದೆ. ಕಾನೂನು ಇಲಾಖೆ ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ.ಯಾವುದೇ ಅಂಗಾಂಗ ಇದ್ದರೂ ಜನರು ವಾಪಸ್ ಕೊಡಬೇಕು. 1978 ಹಿಂದಿನಿಂದ ಪ್ರಾಣಿ ಅಂಗಾಂಗ ಇರೋರಿಗೆ ಈ ಅವಕಾಶ ಕೊಡಲಾಗಿದೆ. ಅಂಗಾಗ ವಾಪಸ್ ಮಾಡಿದರೆ ಕೇಸ್ ಹಾಕಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button