ಡಿಸೆಂಬರ್ 21, 22ರಿಂದ ನಂದಿನಿ ಎಮ್ಮೆ ಹಾಲು ಮಾರಾಟಕ್ಕೆ ಕೆಎಂಎಫ್‌ ನಿರ್ಧಾರ

ಬೆಂಗಳೂರು :ರಾಜ್ಯದಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಎಮ್ಮೆ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ.
ಡಿಸೆಂಬರ್ 21 ಮತ್ತು 22 ರಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ನಂದಿನಿ ಎಮ್ಮೆ ಹಾಲು ಸಿಗಲಿದೆ.

ಹಾಲಿನ ದರಕ್ಕೆ ಹೋಲಿಕೆ ಮಾಡಿದರೆ ಎಮ್ಮೆ ಹಾಲಿನ ದರ ಸ್ವಲ್ಪ ದುಬಾರಿಯಾಗಿದೆ. ನಂದಿನಿ ಎಮ್ಮೆ ಹಾಲಿನ ದರ ಒಂದು ಲೀಟರ್ ಗೆ ಸುಮಾರು 70-75 ರೂಪಾಯಿ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದ್ದು ಇನ್ನೂ ಅಂತಿಮ ಬೆಲೆ ನಿರ್ಧಾರವಾಗಿಲ್ಲ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಆರಂಭದಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ತಿಳಿಸಿರುವುದಾಗಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಎರಡು ವರ್ಷಗಳ ಹಿಂದೆ, ಕೆಎಂಎಫ್ ಸುಮಾರು 4,000-5,000 ಲೀಟರ್ ಎಮ್ಮೆ ಹಾಲನ್ನು ಮಾರಾಟ ಮಾಡುತ್ತಿತ್ತು, ಆದರೆ ಪೂರೈಕೆ ಕೊರತೆಯಿಂದಾಗಿ ಸ್ಥಗಿತಗೊಂಡಿತು.

Latest Indian news

Popular Stories