ರೈತನನ್ನು ಅಪಮಾನ ಮಾಡಿದ್ದ ಪ್ರಕರಣ : ಮೆಟ್ರೋ ಮೇಲ್ವಿಚಾರಕನನ್ನು ವಜಾಗೊಳಿಸಿ ‘BMRCL’ ಆದೇಶ

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ಬಟ್ಟೆ ಕೊಳೆಯಾಗಿದೆ ಎಂದು ರೈತನನ್ನು ಆಪಮಾನ ಮಾಡಿದ ಪ್ರಕಾರಣಕ್ಕೆ ಸಂಬಂಧಿಸಿದಂತೆ ಇದೀಗ ಮೆಟ್ರೋ ಸಿಬ್ಬಂದಿ ಮೇಲ್ವಿಚಾರಕನನ್ನು ವಜಾ ಮಾಡಲಾಗಿದೆ.ಮೆಟ್ರೋ ಸೆಕ್ಯೂರಿಟಿ ಮೇಲ್ವಿಚಾರಕ ವಜಾಗೊಳಿಸಿ BMRCL ಆದೇಶ ಹೊರಡಿಸಿದ್ದಾರೆ.

ಮೆಟ್ರೋದಲ್ಲಿ ಅನ್ನದಾತನ ಮೇಲೆ ಮೆಟ್ರೋ ಸಿಬ್ಬಂದಿ ದರ್ಪ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮೆಟ್ರೋ ಸಿಬ್ಬಂದಿಯು ರೈತರೊಬ್ಬರನ್ನು ನೋಡಿ ನಿಮ್ಮ ಬಟ್ಟೆ ಕೊಳೆಯಾಗಿದೆ ಅಂತ ಒಳಗೆ ಬಿಡಲು ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ಸ್ಥಳದಲ್ಲಿದ್ದವರು ಕೂಡ ಆಕ್ರೋಶ ವ್ಯಕ್ರಪಡಿಸಿದ್ದಾರೆ. ಕಾನೂನು ಪ್ರಕಾರ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳನ್ನು ಒತ್ತಾಯಪಡಿಸಿದ್ದಾರೆ. ಅನ್ನದಾತನನ್ನು ಗಂಟೆಗಟ್ಟಲೇ ಹೀಗೆ ಕಾಯಿಸುವುದರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಹೊರ ರಾಜ್ಯದವರನ್ನು ನಮ್ಮ ಮೆಟ್ರೋದಲ್ಲಿ ನೇಮಕ ಮಾಡಿಕೊಳ್ಳುತ್ತಿರುವುದು ಕೂಡ ಆಕ್ರೋಶವನ್ನು ಹೆಚ್ಛಳ ಮಾಡಿದ್ದು, ಕನ್ನಡಿಗರಿಗೆ ಇವರು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Latest Indian news

Popular Stories