
Bengaluru Urban
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ: ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ
ಬೆಂಗಳೂರು :ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಆಘಾತ ಎದುರಾಗಿದೆ. ಡಿಸೆಂಬರ್ ಅಂತ್ಯದವರೆಗೆ ತಮಿಳುನಾಡಿಗೆ ದಿನಕ್ಕೆ 3,128 ಕ್ಯೂಸೆಕ್ ನೀಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಮಂಗಳವಾರ ಶಿಫಾರಸು ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದರು, ರಾಜ್ಯದಿಂದ ನೀರು ಹರಿಸಲು ಕೇಳಿರುವುದು ಅನ್ಯಾಯ ಎಂದಿದ್ದಾರೆ. ” ದಕ್ಷಿಣ ಲಂಕೆಯ ಕರಾವಳಿಯಲ್ಲಿ ಚಂಡಮಾರುತ ಸಂಚಾರದಿಂದ ತಮಿಳು ನಾಡಿನಾದ್ಯಂತ ಭಾರಿ ಮಳೆಯಾಗುತ್ತಿದೆ.
ಎರಡು ವಾರಗಳ ಹಿಂದೆಯಾದ ವಾಯುಭಾರ ಕುಸಿತ ಹಾಗೂ ಈಗ ಚಂಡಮಾರುತ ಸಂಚಾರದಿಂದ ತಮಿಳು ನಾಡಿಗೆ ಸಾಕಷ್ಟು ನೀರು ಸಂಗ್ರಹವಾಗಲಿದ್ದು, ನೆರೆ ರಾಜ್ಯವಾದ ತಮಿಳು ನಾಡಿನಲ್ಲಿ ಸಾಕಷ್ಟು ನೀರು ಸಂಗ್ರಹವಿರಬೇಕಾದರೆ ನಮ್ಮ ಕಾವೇರಿ ನೀರನ್ನು ಅವರ ಹಕ್ಕಾಗಿ ಕೇಳುವುದು ನ್ಯಾಯಸಮ್ಮತವಾದದ್ದಲ್ಲ.” ಎಂದಿದ್ದಾರೆ.




