Bengaluru UrbanFeatured Story

ದೇವೇಗೌಡರ ಮೇಲೆ ನನಗೆ ಭರವಸೆ ಇದೆ ಆದರೆ ಎಚ್. ಡಿ ಕುಮಾರಸ್ವಾಮಿ ಮೇಲೆ ಇಲ್ಲ : ಸಿಎಂ ಇಬ್ರಾಹಿಂ

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಇಬ್ರಾಹಿಂ ಅವರು
ದೇವೇಗೌಡರ ಮೇಲೆ ನನಗೆ ಭರವಸೆ ಇದೆ.ಆದರೆ ಕುಮಾರಸ್ವಾಮಿ ಕುಮಾರಸ್ವಾಮಿಅವರ ಮೇಲೆ ನನಗೆ ಭರವಸೆ ಇಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಟೆಕ್ನಿಕಲಿ ಹಾಗೂ ಮೆಂಟಲಿ ಎರಡೂ 100% ಜೆಡಿಎಸ್‌ನಲ್ಲಿ ಇದ್ದೇನೆ. ನಾನೇ ಅಧ್ಯಕ್ಷ ಅಂತ ಹೇಳಿದ್ದೇನೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯೋಕೆ ಆಗಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

ಬೇವು-ಬೆಲ್ಲಾ ಎರಡೂ ನನಗೆ ಸಿಕ್ಕಿದೆ. ನಿರ್ಧಾರ ಮರುಪರಿಶೀಲನೆ ಮಾಡಿ ಎಂದು ದೇವೇಗೌಡರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಕೇರಳ ಸಿಎಂ ಸ್ಟೇಟ್‌ಮೆಂಟ್ ನೋಡಿ ಮನಸ್ಸಿಗೆ ನೋವಾಯಿತುಇವತ್ತು ರಾಜ್ಯದಲ್ಲಿ ನಾವು ಯಾವ ಸಿದ್ಧಾಂತಕ್ಕಾಗಿ ನಿಂತಿದ್ದೇವೆ. ದೇವೇಗೌಡರು ಆ ಸಿದ್ಧಾಂತಕ್ಕಾಗಿ ನಿಲ್ಲಬೇಕು ಅನ್ನೋದೆ ನಮ್ಮ ಇಚ್ಛೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button