ಡಿಸಿಸಿ ಬ್ಯಾಂಕ್ ಚುನಾವಣೆ, ಖಂಡ್ರೆ v/s ನಾಗಮಾರಪಳ್ಳಿ ಜಟಾಪಟಿ

ಬೀದರ್ : ಮುಂದಿನ ತಿಂಗಳು ಅಕ್ಟೋಬರ್ 4 ರಂದು ಗಡಿ ಜಿಲ್ಲೆ ಬೀದರ್ನ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿದ್ದು, ಸಚಿವ ಈಶ್ವರ ಖಂಡ್ರೆ ಹಾಗು ಉಮಾಕಾಂತ ನಾಗಮಾರಪಳ್ಳಿ ನಡುವೆ ಜಟಾಪಟಿ ಜೋರಾಗಿದೆ.

ಚುನಾವಣೆ ಹಿನ್ನೆಲೆ ಇಂದು ಸುದ್ದಿಗೋಷ್ಟಿ ನಡೆಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ 38 ವರ್ಷಗಳಿಂದ ನಡೆಯದೇ ಇದ್ದ ಚುನಾವಣೆ ಈ ಬಾರಿ ನಡೆಯುತ್ತಿದೆ. ಅದೂ ಸ್ವಾಗತಾರ್ಹ, ಆದರೆ ಈ ಬಾರಿಯ ಚುನಾವಣೆ ಧರ್ಮ ಹಾಗೂ ಅಧರ್ಮದ ನಡುವೆ ನಡೆಯುತ್ತಿದೆ.

ಸಹಕಾರ ಸಂಘದ ಚುನಾವಣೆ ಬದಲಾಗಿ ಸರಕಾರದ ಚುನಾವಣೆಯಾಗಿ ಮಾರ್ಪಾಡಾಗಿದೆ. ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಹೆಸರು ಹೇಳದೇ ಅಧಿಕಾರ ದುರಪಯೋಗ ಮಾಡಿಕೊಂಡು ಈಶ್ವರ ಖಂಡ್ರೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದರು. ಸರ್ಕಾರದ ಒತ್ತಡಕ್ಕೆ ಮಣಿದು ಅಧಿಕಾರಿಗಳು ಹಾಗು ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ.

ನಾರಂಜಾ ಸಕ್ಕರೆ ಕಾರ್ಖಾನೆಗೆ ಕಡಿಮೆ ದಾಸ್ತಾನು ಇದ್ರೂ ಹೆಚ್ಚಿನ ಸಾಲ ನೀಡಿದ್ದಾರೆ ಎಂಬ ಸಚಿವ ಈಶ್ವರ ಖಂಡ್ರೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಈಶ್ವರ ಖಂಡ್ರೆ ಸುಳ್ಳಿನ ಸರಮಾಲೆ ಹಾಕುತ್ತಿದ್ದಾರೆ.
ನನ್ನ ಅಧಿಕಾರವಧಿಯಲ್ಲಿ ಏನೇ ಅವ್ಯವಹಾರ ಆಗಿದ್ದರೆ ಆ ಕುರಿತು ತನಿಖೆ ಮಾಡಲಿ ಎಂದು ಸಚಿವ ಈಶ್ವರ ಖಂಡ್ರೆಗೆ ತಿರುಗೇಟು ನೀಡಿದರು.

ಈಗಾಗಲೇ ನಮ್ಮ ಪೆನಾಲ್ನ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿಸಿಸಿ ಬ್ಯಾಂಕ್ ಬೆಳವಣಿಗೆಗೆ ಶ್ರಮಿಸಿದ ನಮ್ಮ ನಾಗಮಾರಪಳ್ಳಿ ಕುಟುಂಬದ ಜೊತೆಗೆ ಸಾರ್ವಜನಿಕರು, ಡೆಲಿಗೇಟ್ ಪಡೆದ ಸದಸ್ಯರು ಇರ್ತಾರೆ.ಈ ಬಾರಿಯೂ ನಮ್ಮ ಬೆಂಬಲಕ್ಕೆ ಇರಲಿದ್ದಾರೆ ಎಂದರು.

Latest Indian news

Popular Stories