ನ್ಯೂಯಾರ್ಕ್ : ಭಾರೀ ಮಳೆಗೆ ಅಮೆರಿಕಾದ ಆರ್ಥಿಕ ರಾಜಧಾನಿ ನ್ಯೂಯಾರ್ಕ್ ತತ್ತರಿಸಿದ್ದು ಜನ ಜೀವನ ಅಷ್ಟವ್ಯಾಸ್ತ ಗೊಂಡಿದ್ದು ಪ್ರವಾಹದ ಭೀತಿ ಎದುರಾಗಿದೆ.
ಈಶಾನ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿನ್ನೆ ರಾತ್ರಿಯಿಡೀ ಮಳೆ ಧಾರಾಕಾರವಾಗಿ ಸುರಿದಿದ್ದು ಅಲ್ಲಿನ ರಸ್ತೆಗಳು ಜಲವ್ರತವಾಗಿವೆ. ಜನರು ಮನೆಯಲ್ಲಿಯೇ ಉಳಿದು ಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.ತಗ್ಗುಪ್ರದೆಶ ಮತ್ತು ನೆಲಮಾಳಿಗೆಯ ಅಪಾರ್ಟ್‌ಮೆಂಟ್‌ಗಳಲ್ಲಿನ ನಿವಾಸಿಗಳು ಎತ್ತರದ ಜಾಗಕ್ಕೆ ಸ್ಥಳಾಂತರಗೊಳ್ಳಬೇಕು ಅಧಿಕಾರಿಗಳು ಸೂಚಿಸಿದ್ದಾರೆ.