ಬೆಂಗಳೂರು: ರಾಮೋತ್ಸವದ ಹವಾ, ಲೋಕ ಸಮರದ ರಣೋತ್ಸಾಹದಲ್ಲಿರುವ ರಾಜ್ಯ ಕೇಸರಿಪಡೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಂಭಾವ್ಯ ಭೇಟಿ ಮತ್ತಷ್ಟು ಹುರುಪು ತುಂಬುವ ನಿರೀಕ್ಷೆಯಿದೆ. ಮೋದಿಯವರು ಇದೇ 19 ರಂದು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.
ಬಿಜೆಪಿ ರಾಜ್ಯ ಪ್ರಧಾನಿ ಕಾರ್ಯದರ್ಶಿ ಪಿ.ರಾಜೀವ್ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ ಪ್ರಕಾರ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ( ಬಿಐಇಟಿಸಿ)ಗೆ 19ರಂದು ಭೇಟಿ ನೀಡುವ ಸಾಧ್ಯತೆಗಳಿದ್ದು, ಪ್ರಧಾನಿ ಕಚೇರಿಯಿಂದ ಮಾಹಿತಿ ಲಭಿಸಿದೆ.
ಇದೇ ಕಾರಣಕ್ಕೆ 19ರಂದು ನಡೆಯಲಿದ್ದ ಪಕ್ಷದ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮೋದಿ ಭೇಟಿ ವೇಳೆ ರೋಡ್ ಶೋ ಗೂ ಚಿಂತನೆ ನಡೆದಿದೆ. ಈ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಿ, ಪ್ರಧಾನಿ ಭೇಟಿ ಅಧಿಕೃತವಾದ ನಂತರ ಮುಂದಿನ ಹೆಜ್ಜೆಯಿಡುತ್ತೇವೆ. ಇದೇ ವೇಳೆ ವಿಶೇಷ ಕಾರ್ಯಕಾರಿಣಿ ಸಭೆ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಪಿ.ರಾಜೀವ್ ಸ್ಪಷ್ಟಪಡಿಸಿದರು.