ಉಡುಪಿ: ಅಲೆವೂರಿನ ಉದ್ಯಮಿಗೆ ಟ್ರೆಡಿಂಗ್ ಆ್ಯಪ್‌ನಲ್ಲಿ ಕೋಟ್ಯಂತರ ರೂ. ವಂಚನೆ

ಉಡುಪಿ: ಅಲೆವೂರಿನ ಉದ್ಯಮಿಯೊಬ್ಬರಿಗೆ ಟ್ರೇಡಿಂಗ್ ಆ್ಯಪ್ ಮೂಲಕ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ವರದಿಯಾಗಿದೆ.

ಅಲೆವೂರಿನ ವೆಂಕಟರಮಣ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಟ್ರೆಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಟ್ರೆಡಿಂಗ್ ಆ್ಯಪ್ ಲಿಂಕ್ನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದು, ಇದನ್ನು ನಂಬಿದ ವೆಂಕಟರಮಣ ಲಿಂಕ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ನಮೂದಿಸಿದ್ದರು.

ಬಳಿಕ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಡಿ.5ರಿಂದ ಜ.9ರತನಕ ಹಂತ ಹಂತವಾಗಿ 1,38,99,000ರೂ. ಹಣವನ್ನು ಇವರು ಪಾವತಿಸಿದ್ದರು. ಆದರೆ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನು ನೀಡದೇ ವೆಂಕಟರಮಣ ಅವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories