ಆನೇಕಲ್, ಆಗಸ್ಟ್ 18: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅತ್ಯಾಚಾರ-ಕೊಲೆ ಆರೋಪಿ ಕಾಲಿಗೆ ಫೈರಿಂಗ್ ಮಾಡಿ ಸೆರೆ ಹಿಡಿದಿದ್ದಾರೆ.
ಬನ್ನೇರುಘಟ್ಟ ಬಳಿಯ ಬ್ಯಾಟರಾಯನದೊಡ್ಡಿಯಲ್ಲಿ ನಡೆದಿದ್ದ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ (Rape, Murder) ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿ ಸೋಮ ಅಲಿಯಾಸ್ ಸೋಮಶೇಖರ್ ಕಾಲಿಗೆ ಗುಂಡಿಕ್ಕಿ ಸೆರೆ ಹಿಡಿದಿರುವ ಕುರಿತು ಬೆಂಗಳೂರಿನ ಬನ್ನೇರುಘಟ್ಟ (Bannerghatta) ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ವರದಿಯಾಗಿದೆ.
ಇಂದು ಶುಕ್ರವಾರ ಬೆಳಗ್ಗೆ ಸ್ಥಳ ಮಹಜರಿಗೆ ಕರೆದೊಯ್ಯುವಾಗ ಪರಾರಿಯಾಗಲು ಆರೋಪಿ ಯತ್ನಿಸಿದಾಗ ಪೊಲೀಸ್ ಫೈರಿಂಗ್ ಆಗಿದೆ. ಆರೋಪಿ ಸೋಮ ಪಿಸಿ ಮಾದಪ್ಪ ಮೇಲೆ ಡ್ಯಾಗರ್ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯ ಎಡಗಾಲಿಗೆ ಕಾಲಿಗೆ ಜಿಗಣಿ (Jigani) ಇನ್ಸ್‌ಪೆಕ್ಟರ್ ಮಂಜುನಾಥ್ರಿಂದ ಫೈರಿಂಗ್ ಆಗಿದೆ. ಆರೋಪಿ ಸೋಮನಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯಲ್ಲಿ ಮನೆಯಿಂದ ಹೊರಹೋದ ಮುನಿರತ್ನ(38) ಎಂಬ ಮಹಿಳೆಯ ಮೇಲೆ ಕಾಮುಕ ಸೋಮ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ. ಬ್ಯಾಟರಾಯನದೊಡ್ಡಿ ಮಹಿಳೆಯ ಮೇಲೆ ಎರಗಿದ್ದ ಮೂವರು ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಹಿಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು. ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಗೊತ್ತಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ಕು ತಂಡಗಳನ್ನು ರಚನೆ ಮಾಡಿ, ಫೀಲ್ಡ್ಗೆ ಇಳಿದಿದ್ದರು.
ಗಾಂಜಾ ಮತ್ತಿನಲ್ಲಿ ಮಹಿಳೆ ಮೇಲೆ ಕಿರಾತಕರು ಅತ್ಯಾಚಾರ ಎಸಗಿದ್ದರು. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಳಿಕ ಕಿರಾತಕರು ಗ್ರಾಮದಲ್ಲಿಯೇ ಇದ್ದರು. ಮೃತ ದೇಹ ಸಿಕ್ಕ ಜಾಗದಲ್ಲಿ ಯಾರಿಗೂ ಸಂಶಯ ಬರದಂತೆ ಓಡಾಡಿಕೊಂಡಿದ್ದರು. ಆರೋಪಿ ಹರೀಶ್ ಎಂಬುವನು ಮಾಧ್ಯಮಗಳಿಗೆ ಬೈಟ್ ಸಹ ನೀಡಿದ್ದ. ಪೋಲೀಸರ ತನಿಖೆಯ ದಿಕ್ಕು ತಪ್ಪಿಸಲು ಮುಂದಾಗಿದ್ದ ಆರೋಪಿಗಳು.
ಮಹಿಳೆ ಹಾಗೂ ಮಗು ಕಾಣದೆ ಇದ್ದಾಗ ಕುಟುಂಬಸ್ಥರಿಂದ ಹುಡುಕಾಟ ನಡೆದಿತ್ತು. ಈ ವೇಳೆ ಆರೋಪಿ ಹರೀಶ್ ಸಹ ಹುಡುಕಾಡುವ ಡ್ರಾಮಾ ಮಾಡಿದ್ದ. ಹುಡುಕಲು ಹೋದ ಕೆಲವೇ ನಿಮಿಷದಲ್ಲಿ ಮಹಿಳೆ ಜೊತೆಯಲ್ಲಿದ್ದ ಮಗುವನ್ನ ಆರೋಪಿ ಕರೆತಂದಿದ್ದ.
ಇದರಿಂದ ಜಾಗೃತರಾದ ಪೊಲೀಸರು ನಿರ್ಜನ ಪ್ರದೇಶದಲ್ಲಿದ್ದ ಮಗುವನ್ನ ಐದೇ ನಿಮಿಷದಲ್ಲಿ ಕರೆತಂದಿದ್ದ ಆರೋಪಿ ಹರೀಶನನ್ನ ಠಾಣೆಗೆ ಕರೆತಂದು ವಿಚಾರಿಸಿಕೊಳ್ಲಲು ಶುರುಮಾಡಿದರು. ಎಷ್ಟೇ ಕೇಳಿದ್ರು ಅಸಾಮಿ ಒಂದೊಂದು ಕಥೆ ಕಟ್ಟುತ್ತಿದ್ದ. ವಿಚಾರಣೆ ಮುಂದುವರಿದಂತೆ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ನಿಜಾಂಶವನ್ನ ಕಕ್ಕಿದ್ದ ಕಾಮುಕ. ಗಾಂಜಾ ಹಾಗೂ ಎಣ್ಣೆ ಮತ್ತಿನಲ್ಲಿ ಮೂವರು ಸೇರಿ ಅತ್ಯಾಚಾರ ಎಸಗಿರೋ ಬಗ್ಗೆ ಬಾಯ್ಬಿಟ್ಟಿ ಕಿರಾತಕ. ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದ ಚಾಣಾಕ್ಷತನದ ತನಿಖೆಯಿಂದ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆ ಹಿಡಿದು ಜೈಲಿಗಟ್ಟಲಾಗಿದೆ.