ನವ ದೆಹಲಿ:ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಮಳೆಯಿಂದ ಸತ್ತವರ ಸಂಖ್ಯೆ ಗುರುವಾರ 74 ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಕರ್ತರು ಶಿಮ್ಲಾದ ಶಿವ ದೇವಾಲಯದ ಸಮೀಪದಲ್ಲಿ ಮುಳುಗಿದ ಅವಶೇಷಗಳಿಂದ ಮತ್ತೊಂದು ದೇಹವನ್ನು ಹೊರತೆಗೆದರೆ, ಚಂಬಾದಲ್ಲಿ ಇನ್ನಿಬ್ಬರು ಸಾವನ್ನಪ್ಪಿದ್ದಾರೆ.
ಸಮ್ಮರ್ ಹಿಲ್‌ನಲ್ಲಿರುವ ಶಿವ ದೇವಾಲಯದಲ್ಲಿ ಸಂಭವಿಸಿದ ಭೂಕುಸಿತ ಸೇರಿದಂತೆ ಶಿಮ್ಲಾದಲ್ಲಿ ಮೂರು ಪ್ರಮುಖ ಭೂಕುಸಿತಗಳಲ್ಲಿ 21 ಜನರು ಸಾವನ್ನಪ್ಪಿದ್ದಾರೆ.
ಮುಂಗಾರು ಆರಂಭವಾದ 55 ದಿನಗಳಲ್ಲಿ ರಾಜ್ಯದಲ್ಲಿ 113 ಭೂಕುಸಿತ ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ₹ 2,491 ಕೋಟಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ₹ 1,000 ಕೋಟಿ ನಷ್ಟವಾಗಿದೆ.