ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಮಹಿಳೆ ಅಪಹರಣ ಪ್ರಕರಣ ಸಂಬಂಧ ಎಸ್‌ಐಟಿ ವಶದಲ್ಲಿರುವ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಮಧ್ಯಾಹ 2.45 ಮುಂದೂಡಿಕೆಯಾಗಿದೆ.

ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ಎಚ್.ಡಿ. ರೇವಣ್ಣ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ 2.45 ಮುಂದೂಡಿಕೆ ಮಾಡಲಾಗಿದೆ.

ಮೈಸೂರಿನ ಕೆ.ಆರ್ ನಗರ ಠಾಣೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಮಹಿಳೆಯ ಮಗ ಇತ್ತೀಚೆಗೆ ನನ್ನ ತಾಯಿ ಕಾಣೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ದೂರು ಸಲ್ಲಿಸಿದ್ದ. ಈ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಸಂಬಂಧಿಯಾಗಿರುವ ಸತೀಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಬಂಧನಕ್ಕೂ ಮುನ್ನ ರೇವಣ್ಣ ನಿರೀಕ್ಷಣಾ ಜಾಮೀನನ್ನು ಸಲ್ಲಿಸಿದ್ದರು. ಆದರೆ ಅದನ್ನು ಕೋರ್ಟ್ ಅದನ್ನು ಮುಕ್ತಾಯಗೊಳಿಸಿದ್ದು ಇದೀಗ ಬಂಧನದಲ್ಲಿರುವ ರೇವಣ್ಣ ಅವರು ಮತ್ತೆ ಜಾಮೀನಿಗಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಂದು ಮಧ್ಯಾಹ್ನ 2.45 ಮುಂದೂಡಿದೆ.

Latest Indian news

Popular Stories