
Bengaluru UrbanFeatured Story
ಶಾಲಾ ಸಮಯ ಬದಲಾವಣೆಗೆ ಪೋಷಕರ ವಿರೋಧ: ಈಗಿರುವ ಶಾಲಾ ಸಮಯ ಮುಂದುವರಿಕೆಗೆ ಮನವಿ
ಬೆಂಗಳೂರು :ಶಾಲಾ ಸಮಯ ಬದಲಾವಣೆಗೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಪೋಷಕರ ಒಕ್ಕೂಟ ವಿರೋಧ ವ್ಯಕ್ತಪಡಿಸಿವೆ. ಈಗಿರುವ ಶಾಲಾ ಸಮಯ ಮುಂದುವರಿಕೆಗೆ ಮನವಿ ಮಾಡಿವೆ. ಇನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ”ಇವರ ಮನವಿಯನ್ನು ಕೊರ್ಟ್ಗೆ ಮನವರಿಕೆ ಮಾಡಿಕೊಡಲಾಗುವುದು.ಕೋರ್ಟ್ ನಿರ್ಧಾರದಂತೆ ಮುಂದಿನ ಕ್ರಮವಹಿಸಲಾಗುವುದು” ಎಂದು ತಿಳಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಶಾಲಾ ಸಮಯದಲ್ಲಿ ಬದಲಾವಣೆ ಮಾಡುವ ಕುರಿತ ಹೈಕೋರ್ಟ್ ಸಲಹೆ ಮೇರೆಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸೋಮವಾರ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಪೋಷಕರ ಒಕ್ಕೂಟ, ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಚಾರ ದಟ್ಟಣೆ ಕಾರಣಕ್ಕೆ ಶಾಲೆಗಳ ಸಮಯ ಬದಲಾವಣೆ ಪರ್ಯಾಯ ಮಾರ್ಗವಲ್ಲ ಎನ್ನುವ ಸಲಹೆಯನ್ನು ಶಾಲಾ ಪಾಲುದಾರರು ಸರ್ಕಾರಕ್ಕೆ ತಿಳಿಸಿದರು. ಒಟ್ಟಾರೆ




