ಬೆಂಗಳೂರು, ಫೆಬ್ರವರಿ 29: ಬೆಂಗಳೂರಿನಲ್ಲಿ ಕುಡಿಯುವ ಕಾವೇರಿ ನೀರಿಗೆ ಹಾಹಾಕಾರ ಶುರುವಾಗಿದೆ. ಜಲಮಂಡಳಿಗೆ ನೀರು ಪೂರೈಕೆಗೆ ಕೊರತೆ ಎದುರಾಗಿದ್ದು, ಇತ್ತ ಟ್ಯಾಂಕರ್ ನೀರು ಪೂರೈಕೆಯಲ್ಲಿ ಮಾಫಿಯಾ ಶುರುವಾಗಿದೆ ಎನ್ನಲಾಗಿದೆ. ಇದಕ್ಕೆಲ್ಲ ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮೂಗುದಾರ ಹಾಕಲು ನಿರ್ಧರಿಸಿದ್ದಾರೆ.ಬೆಂಗಳೂರಿನಲ್ಲಿ ಈ ಬೇಸಿಗೆಯಲ್ಲಿ ನೀರು ಪೂರೈಸುವ ಟ್ಯಾಂಕರ್‌ಗಳ ದರ ಕೆಲವೇ ದಿನಗಳಲ್ಲಿ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ.
ನೀರಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಟ್ಯಾಂಕ್ ಮಾಫಿಯಾ ಹಾವಳಿ ಶುರುವಾಗಿದೆ. ಹೀಗಾಗಿ ಬಿಬಿಎಂಪಿ-ಜಲಮಂಡಳಿಯು ಟ್ಯಾಂಕರ್‌ಗೆ ಇಂತಿಷ್ಟು ಎಂದು ದರ ನಿಗದಿ ಮಾಡಲಿವೆ. ಬೆಂಗಳೂರಿನಲ್ಲಿ ಒಟ್ಟು 3500 ನೀರಿನ ಟ್ಯಾಂಕರ್ ನೋಂದಣಿ ಆಗಿವೆ. ಬಿಬಿಎಂಪಿಯಲ್ಲಿ 60 ಟ್ಯಾಂಕರ್‌ಗಳೂ ವ್ಯಾಪಾರ ಪರವಾನಗಿ ಪಡೆದಿದ್ದಾರೆ.
ನೀರಿನ ವ್ಯವಹಾರ ನಡೆಸುವ ಎಲ್ಲರಿಗೂ ನಗರಕ್ಕೆ ನೀರು ಪೂರೈಕೆಗಾಗಿ ನೋಂದಣಿಗೆ ಸರ್ಕಾರ ಅವಕಾಶ ಕಲ್ಪಿಸಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)- ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಬೆಂಗಳೂರಲ್ಲಿನ ನೀರಿನ ಅಭಾವ ಕುರಿತು ಬುಧವಾರ ಸಭೆ ನಡೆಯಿತು. ಈ ವೇಳೆ ನೀರಿನ ಟ್ಯಾಂಕರ್ ದರ ನಿಗದಿಗೆ ಅಧಿಕಾರಿಗಳು ತೀರ್ಮಾನಿಸಿದರು.Bengaluru Water Issue: ಟ್ಯಾಂಕರ್ ಮಾಫಿಯಾದಲ್ಲಿ ‘ಡಿಕೆಶಿ’ ಪಾತ್ರ ಶಂಕೆ: ಎಎಪಿನಿಗದಿತ ದರಕ್ಕೆ ಹೆಚ್ಚಿನ ಹಣ ಪಡೆದರೆ ಕಾನೂನು ಕ್ರಮದರ ನಿಗದಿ ಮಾಡಿದ ಬಳಿಕವೇ ಟ್ಯಾಂಕರ್ ಮಾಲೀಕರು ಹೆಚ್ಚಿನ ದರ ಪಡೆದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೇರಿದಂತೆ ಇತರ ಕಾಯ್ದೆಯಡಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು
ಸದ್ಯ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿದ್ದು, ಟ್ಯಾಂಕರ್ ನೀರು ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಜಲಮಂಡಳಿ (BWSSBP) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸಮಸ್ಯೆಯ ಪರಿಹಾರಕ್ಕೆ 200 ನೀರಿನ ಟ್ಯಾಂಕರ್ ಬಳಕೆಬೆಂಗಳೂರಿನ 110 ಹಳ್ಳಿಗಳು ಬರುವ 30 ವಾರ್ಡ್‌ಗಳಿಗೊಬ್ಬ ಸಹಾಯಕ ಇಂಜಿನಿಯರ್ ನೇಮಕ ಮಾಡಲಾಗುವುದು.