ಆಡಳಿತ ಸೇವೆ ಪರೀಕ್ಷೆಯಲ್ಲಿ ಮೂವರು ಸೋದರಿಯರು ಟಾಪ್ !

ಜೈಪುರ: ಆಡಳಿತ ಸೇವೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಷ್ಟು ಸುಲಭದ ಮಾತಲ್ಲ. ಹಲವಾರು ಬಾರಿ ಯತ್ನಿಸಿದರೂ ಯಶಸ್ಸು ಕಷ್ಟ. ಆದರೆ, ಮೂವರು ಸಹೋದರಿಯರು ಒಟ್ಟಿಗೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ.ಮೂರೂ ಜನ ಟಾಪಸ್ಟ್ ಆಗಿರುವುದು ವಿಶೇಷ.
ಹನುಮಾನಗಡದ ಅನ್ಶು, ರೀತು ಹಾಗೂ ಸುಮನ್ ಈ ಸಾಧಕಿಯರು. ಆರ್‌ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಕುರಿತು ಐಎಫ್‌ಎಸ್ ಅಧಿಕಾರಿ ಪರ್ವೀನ್ ಲಾಸ್ವಾನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಕುತೂಹಲದ ವಿಷಯ ಎಂದರೆ ಇವರ ಇನ್ನಿಬ್ಬರು ಸಹೋದರಿಯರು ಇದೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉನ್ನತ ಉದ್ಯೋಗದಲ್ಲಿದ್ದಾರೆ. ಅವರ ಹೆಸರು ರೋಮಾ ಹಾಗೂ ಮಂಜು.
ಈ ಮೂಲಕ ಒಂದೇ ಕುಟುಂಬದ ಐವರು ಸಹೋದರಿಯರು ಉನ್ನತ ಪರೀಕ್ಷೆಯಲ್ಲಿ ಒಂದೇ ಬಾರಿ ತೇರ್ಗಡೆಯಾಗಿರುವ ಸಾಧನೆ ಮಾಡಿದ್ದಾರೆ. ಇವರು ರೈತ ಸಹದೇವ್ ಸಹರನ್ ಅವರ ಪುತ್ರಿಯರು. ಮಂಗಳವಾರ ಆರ್‌ಪಿಎಸ್‌ಸಿ 2018ರ ಪರೀಕ್ಷೆಯ ಫಲಿತಾಂಶ ಬಂದಿದೆ. ಅದರಲ್ಲಿ ಮುಕ್ತಾ ರಾವ್ ಮೊದಲ ಸ್ಥಾನ ಪಡೆದರೆ, ಮನಮೋಹನ ಶರ್ಮಾ, ಶಿವಕಾಶಿ ಕಂಡಾಲ್ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.

Latest Indian news

Popular Stories