ಏ.26ರಂದು ‘ಲೋಕಸಭಾ ಚುನಾವಣೆ’ಗೆ ಮತದಾನ: ರಾಜ್ಯ ಸರ್ಕಾರದಿಂದ ‘ಸಾರ್ವತ್ರಿಕ ರಜೆ’ ಘೋಷಿಸಿ ಆದೇಶ

ಬೆಂಗಳೂರು: ಏಪ್ರಿಲ್.26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡೋದಕ್ಕಾಗಿ ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಆದೇಶಿಸಿದೆ.

ಈ ಕುರಿತಂತೆ ಕಾರ್ಮಿಕ ಆಯುಕ್ತರಿಂದ ಆದೇಶ ಹೊರಡಿಸಿದ್ದು,ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯನ್ನು ದಿನಾಂಕ:16-03-2024ರಂದು ಘೋಷಿಸಿದ್ದು ಅದರಂತೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಿಗಧಿಯಾಗಿರುತ್ತದೆ.

ಈ ಕುರಿತಂತೆ ಕಾರ್ಮಿಕ ಆಯುಕ್ತರಿಂದ ಆದೇಶ ಹೊರಡಿಸಿದ್ದು,ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯನ್ನು ದಿನಾಂಕ:16-03-2024ರಂದು ಘೋಷಿಸಿದ್ದು ಅದರಂತೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಿಗಧಿಯಾಗಿರುತ್ತದೆ.

ದಿನಾಂಕ:26-04-2024 (ಶುಕ್ರವಾರ) ರಂದು ಮೊದಲನೇಯ ಹಂತ ಹಾಗೂ ದಿನಾಂಕ:07-05-2024 (ಮಂಗಳವಾರ) ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ದ.ಕ. ಜಿಲ್ಲೆಯಲ್ಲಿ ದಿನಾಂಕ:26.04.2024 (ಶುಕ್ರವಾರ) ರಂದು ನಿಗಧಿಯಾಗಿರುತ್ತದೆ ಎಂದಿದೆ.

ಸದರಿ ದಿನಾಂಕದಂದು ಮತದಾನ ನಡೆಯಲಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲಾ ಅರ್ಹ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳು 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾದಿನಗಳು) ಕಾಯ್ದೆಯ ಕಲಂ 3-ಎ ಪುಕಾರ ಮತ ಚಲಾಯಿಸಲು ಅವಕಾಶ ಮಾಡಿ ಕೊಡಬೇಕಾಗುತ್ತದೆ. ಆದ್ದರಿಂದ, ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಅರ್ಹರಿರುವ ಎಲ್ಲಾ ಕಾರ್ಮಿಕ ಮತದಾರರಿಗೆ ದಿನಾಂಕ:26-04-2024 ರಂದು ವೇತನ ಸಹಿತ ರಜೆ ನೀಡಿ, ಎಲ್ಲಾ ಅರ್ಹ ಕಾರ್ಮಿಕರು ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಅನುವು ಮಾಡಿಕೊಡಲು ಸೂಚಿಸಿದ್ದಾರೆ.

Latest Indian news

Popular Stories