ಮುಂದಿನ ತಿಂಗಳು 36 ಸಾವಿರ ಮನೆ ಹಂಚಿಕೆ – ಜಮೀರ್ ಅಹಮದ್ ಖಾನ್

ಬೆಂಗಳೂರು : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಡಿ ರಾಜ್ಯದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಪೈಕಿ 36 ಸಾವಿರ ಮನೆ ಮುಂದಿನ ತಿಂಗಳು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಆಯೋಜಿಸಿದ್ದ ಮನೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ‘ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2.32 ಲಕ್ಷ ಮನೆ ಗಳನ್ನು ಈ ವರ್ಷ ದ ಅಂತ್ಯದೊಳಗೆ ಪೂರ್ಣ ಗೊಳಿಸಿ ಹಂಚಿಕೆ ಮಾಡುವ ಗುರಿ ಹೊಂದಿದ್ದು ಮೊದಲ ಹಂತದಲ್ಲಿ 36 ಸಾವಿರ ಮನೆ ಫೆಬ್ರವರಿ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ದಿಂದ 2013 ರಿಂದ ಇದುವರೆಗೆ
2.32 ಲಕ್ಷ ಮನೆ ನಿರ್ಮಿಸಲಾಗುತ್ತಿದ್ದು
ಬಡ ಕುಟುಂಬ ಗಳು ಫಲಾನು ಭವಿಗಳ ಪಾಲಿನ ವಂತಿಗೆ 8200 ಕೋಟಿ ರೂ.ಸರ್ಕಾರ ವೇ ಭರಿಸಲಿದ್ದು, ಮೊದಲ ಕಂತು 500 ಕೋಟಿ ರೂ. ಬಿಡುಗಡೆ ಯಾಗಿದ್ದು ಮನೆಗಳ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ವಿನೂತನ ಕಾರ್ಯಕ್ರಮ
ಡಿ.ಕೆ.ಶಿವಕುಮಾರ್ ಅವರು ಹಮ್ಮಿಕೊಂಡಿರುವ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಇದುವರೆಗೂ ಯಾರೂ ಮಾಡಿಲ್ಲ. ಜನರ ಸಮಸ್ಯೆ ಗೆ ಅಧಿಕಾರಿಗಳ ಜತೆಗೂಡಿ ಸ್ಥಳದಲ್ಲೇ ಬಂದು ಪರಿಹಾರ ಕಲ್ಪಿಸುವುದು ಉತ್ತಮ ನಿರ್ಧಾರ. ಕಾಂಗ್ರೆಸ್ ಸರ್ಕಾರದ ಜನಪರ ಕಾಳಜಿಗೆ ಇದು ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

Latest Indian news

Popular Stories