ಬೀದರ್ ಜಿಲ್ಲಾ ಬಿಜೆಪಿ ಮನೆಯೊಂದು ಮೂರು ಬಾಗಿಲಂತಾಗಿದ್ದು, ನೂತನ ಜಿಲ್ಲಾದ್ಯಕ್ಷರ ಆಯ್ಕೆ ಬಳಿಕವೂ ಮುನಿಸು ಮುಗಿದಂತೆ ಕಾಣುತ್ತಿಲ್ಲಾ. ನೂತನ ಜಿಲ್ಲಾಧ್ಯಕ್ಷರಾಗಿ ಸೋಮನಾಥ್ ಪಾಟೀಲ್ ಆಯ್ಕೆಯಾದ ಬಳಿಕವೂ ಕೇಂದ್ರ ಸಚಿವ ಭಗವಂತ ಖೂಬಾ ಏಕಾಂಗಿಯಾಗಿದ್ದಾರೆ.
ಮೊನ್ನೆಯಷ್ಟೇ ಕೇಂದ್ರ ಸಚಿವ ಖೂಬಾ ಅವರು ಜಿಲ್ಲಾ ಮಟ್ಟದ ಯಾವ ನಾಯಕರು ಇಲ್ಲದೇ ಏಕಾಂಗಿಯಾಗಿ ಹನುಮಾನ್ ದೇವಸ್ಥಾನ ಸ್ವಚ್ಚಗೊಳಿಸಿದ್ದರು. ಜಿಲ್ಲಾಧ್ಯಕ್ಷರಾಗಿ ಸೋಮನಾಥ್ ಪಾಟೀಲ್ ಆಯ್ಕೆ ಬಳಿಲ ಜಿಲ್ಲೆಯ ನಾಲ್ಕು ಶಾಸಕರಾದ ಪ್ರಭು ಚೌಹಾಣ್, ಶರಣು ಸಲಗರ್, ಸಿದ್ದು ಪಾಟೀಲ್ ಹಾಗೂ ಶೈಲೇಂದ್ರ ಬೇಲ್ದಾಳೆ ಮನೆಗಳಿಗೆ ತೆರಳಿ ಶುಭ ಹಾರೈಸಿಕೊಂಡಿದ್ದಾರೆ. ಆದ್ರೆ ಕೇಂದ್ರ ಸಚಿವರು ಬೀದರ್‌ನಲ್ಲೇ ವಾಸವಿದ್ರೂ ಒಮ್ಮೆಯು ಭಗವಂತ ಖೂಬಾ ಅವರ ಮನೆಗೆ ತೆರಳದೇ ಇರೊದು ಚರ್ಚೆಗೆ ಕಾರಣವಾಗಿದೆ. ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಬಳಿಕ ಪಕ್ಷದ ಕಚೇರಿಯಲ್ಲಿ ಅಭಿನಂದನಾ ಸಮಾರಂಭ ಮಾಡಬಹುದಿತ್ತು. ಆದ್ರೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರು ಒಗ್ಗಟ್ಟು ಪ್ರದರ್ಶಿಸದೇ, ಪ್ರತ್ಯೇಕವಾಗಿ ಶಾಸಕರು ಹಾಗೂ ಪ್ರಮುಖ ನಾಯಕರ ಮನೆ ಮನೆಗೆ ತೆರಳ್ತಿರೋದು ಬಿಜೆಪಿಗರನ್ನ ಒಗ್ಗೂಡಿಸುವ ಬದಲು, ಮುನಿಸು ಹೆಚ್ಚಿಸುವ ಕೆಲಸ ಮಾಡ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಜಿಲ್ಲೆಯ ನಾಲ್ಕು ಶಾಸಕರು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರ ವಿರುದ್ದ ಅಸಮಧಾನ ಹೊರಹಾಕಿದ್ದರು. ಇದೀಗ ಜಿಲ್ಲಾಧ್ಯಕ್ಷರು ಕೂಡ ಶಾಸಕರ ಜೊತೆ ಕೈಗೂಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.