ಬರಡು ಜಾನುವಾರ ಚಿಕಿತ್ಸಾ ಶಿಬಿರ ಸಂಪನ್ನ

ಬೀದರ, ಜುಲೈ.13 (ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಔರಾದ ತಾಲೂಕಿನ ಪಶು ಚಿಕಿತ್ಸಾಲಯ ಕೌಡಗಾಂವ ವ್ಯಾಪ್ತಿಯ ಕೌಠಾ (ಬಿ) ಗ್ರಾಮದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ.ಸೂರ್ಯಕಾಂತ ಪರಶೆಟ್ಟಿ ಅವರ ನೇತೃತ್ವದಲ್ಲಿ ಜುಲೈ.13 ರಂದು ಪಶು ಆರೋಗ್ಯ ಹಾಗೂ ಬರಡು ಜಾನುವಾರು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಸುಮಾರು 300 ಜಾನುವಾರುಗಳು ಭಾಗವಹಿಸಿದ್ದವು, ಇದರಲ್ಲಿ 57 ಜಾನುವಾರುಗಳ ಬಂಜೆತನ ಪರೀಕ್ಷೆ ಮಾಡಿ ಬರಡು ಜಾನುವಾರುಗಳಿಗೆ ಸೂಕ್ತ ಚಿಕಿತೆ ನೀಡಲಾಯಿತು. ಜಾನುವಾರುಗಳ ಹಾಗು ಕುರಿಮೇಕೆಗಳ ಗರ್ಭ ತಪಾಸಣೆ ಮಾಡಿ ಲವಣಾಂಶ ಪೊಟ್ಟಣಗಳ ಜೊತೆಗೆ ಜಂತು ನಿವಾರಕ ಔಷಧಿ ವಿತರಿಸಲಾಯಿತು. ಗರ್ಭ ಕಟ್ಟುವಲ್ಲಿ ಸಮಸ್ಯೆ ಹೊಂದಿರುವ ಜಾನುವಾರುಗಳಿಗೆ ಹಾರ್ಮೋನಲ್ ಚಿಕಿತ್ಸೆ ನೀಡಲಾಯಿತು.
ಶಿಬಿರದಲ್ಲಿ ಡಾ.ರಾಜಕುಮಾರ ಬಿರಾದರ ಸಹಾಯಕ ನಿರ್ದೇಶಕರು ಔರಾದ, ಡಾ.ಸಿದ್ಧಾರ್ಥ ಸಾವಳೆ, ಸಿಬ್ಬಂದಿಗಳಾದ ಗಣಪತಿ, ಅಂಗದ್, ಶೇಖರ್, ಬಸವರಾಜ ಇವರು ಕೂಡ ಭಾಗವಹಿಸಿದ್ದರು.

Latest Indian news

Popular Stories