ಬೀದರ್ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ( KRS-PMFBY ) ಅಡಿಯ 2022-23 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆ ಆಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಪರಿಹಾರ ಲೆಕ್ಕ ಹಾಕಲಾಗಿದೆ.
ತಾಳೆಯಾಗದೆ ಇರುವ ಪ್ರಸ್ತಾವನೆಗಳನ್ನು ಸಂರಕ್ಷಣೆ ತಂತ್ರಾಶದಲ್ಲಿ ಪರಿಶೀಲಿಸಲಾಗಿ ಮುಂಗಾರು ಹಂಗಾಮಿನಲ್ಲಿ ತಿರಸ್ಕçತಗೊಂಡ 515, ಹಿಂಗಾರು ಹಂಗಾಮಿನಲ್ಲಿ 26 ಪ್ರಸ್ತಾವನೆಗಳನ್ನು ಈಗಾಗಲೆ ರೈತ ಸಂಪರ್ಕ ಕೇಂದ್ರಗಳಿಗೆ ಕಳುಹಿಸಲಾಗಿದೆ, ಪ್ರಸ್ತುತ ತಿರಸ್ಕçತಗೊಂಡ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯತಗಳಲ್ಲಿ ಪ್ರದರ್ಶಿಸಲಾಗುವುದು. ಪ್ರಯುಕ್ತ ಸಂಬಂಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಮಾತ್ರ ಮಾಹಿತಿಯನ್ನು ಪ್ರಕಟಿಸಿದ ದಿನಾಂಕದಿAದ 15 ದಿನಗಳ ಒಳಗಾಗಿ ತಮ್ಮ ಮನವಿಯನ್ನು ಸಲ್ಲಿಸಲು ಹಾಗೂ ಮರುಪರಿಶೀಲಿಸಲು, ಸದರಿ ಮನವಿಯೊಂದಿಗೆ ಬೆಳೆ ವಿಮೆಗೆ ನೊಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು ಅಗತ್ಯ ದಾಖಲಾತಿಗಳನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ 2022-23ರ ಪಹಣಿ ಪತ್ರಿಕೆಯಲ್ಲಿ ವಿಮೆಗೆ ನೊಂದಾಯಿಸಿದ ಬೆಳೆ ನಮೂದಾಗಿರಬೇಕು.
ಬೆಂಬಲ ಬೆಲೆ ಪ್ರಯೋಜನ ಪಡೆದಿದಲ್ಲಿ, ರಶೀದಿ ಸಲ್ಲಿಸುವುದು ಹಾಗೂ ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು APMC ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ಸದರಿ ದಾಖಲೆ ಸಲ್ಲಿಸಬೇಕೆಂದು ಔರಾದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.