ಡಕಾಯತಿ ಮಾಡಲು ಸಂಚು ರೂಪಿಸುತ್ತಿದ್ದ 4 ಜನ ಆರೋಪಿತರ ಬಂಧನ | ಮಾರಕಾಸ್ತ್ರ ವಶ, ಓರ್ವ ಪರಾರಿ

ಬೀದರ್ : ನಿನ್ನೆ  ರಾತ್ರಿ 02:00  ಕುರುಬಖೇಳಗಿ ಗ್ರಾಮ ವ್ಯಾಪ್ತಿಯಲ್ಲಿನ ಧರಿ ಸಿದ್ದೇಶ್ವರ್ ಮಂದಿರದ ಹತ್ತಿರ ಭಾಲ್ಕಿ – ಹುಮನಾಬಾದ್ ರೋಡಿನ ಮೇಲೆ 5 ಜನ ಆರೋಪಿತರು ದರೋಡೆ ಮಾಡುವ ಉದ್ದೇಶದಿಂದ ಸಿದ್ಧತೆ ಮಾಡಿಕೊಂಡು ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ವಾಹನಗಳಿಗೆ ತಡೆದು ನಿಲ್ಲಿಸಿ ವಾಹನಗಳಲ್ಲಿನ ಜನರಿಗೆ ಹೆದರಿಸಿ, ಅವರಿಂದ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುವ ಏಕೊದ್ದೇಶದಿಂದ ರಸ್ತೆ ಪಕ್ಕದಲ್ಲಿ ವಾಹನಗಳಗಾಗಿ ಕಾಯುತ್ತಾ ನಿಂತಿರುವಾಗ,

ಭಾಲ್ಕಿ ಗ್ರಾಮೀಣ ಸಿಪಿಐ ಮಾರ್ಗದರ್ಶನದಲ್ಲಿ ಪಿ.ಎಸ್.ಐ., ಹಣಮಂತ ಮತ್ತು ಅವರ ಸಿಬ್ಬಂದಿಗಳು ಭಾಲ್ಕಿ ಹುಮನಾಬಾದ್‌ ರಸ್ತೆಯಲ್ಲಿನ ಧರಿ ಸಿದ್ದೇಶ್ವರ್ ಮಂದಿರದ ಹತ್ತಿರ ಏಕ ಕಾಲಕ್ಕೆ ಆರೋಪಿತರ ಮೇಲೆ ದಾಳಿ ಮಾಡಿ ಅವರಿಂದ ಮಾರಕಾಸ್ತ್ರಗಳು ಮತ್ತು 100 ಗ್ರಾಮ ಖಾರದ ಪುಡಿಯನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಖಟಕ ಚಿಂಚೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಳ್ಳಲಾಗಿದೆ.

ಸದರಿ 5 ಜನ ಆರೋಪಿತರ ಪೈಕಿ 4 ಜನರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂದಿತ 4 ಜನ ಆರೋಪಿತರ ಪೈಕಿ ಇಬ್ಬರ ಮೇಲೆ ಈಗಾಗಲೇ ಮಾರಣಾಂತಿಕ ಹಲ್ಲೆ, ಸುಲಿಗೆ, ಮನೆ ಕಳ್ಳತನ ಪ್ರಕರಣಗಳು ವರದಿಯಾಗಿರುತ್ತವೆ.

ತಲೆ ಮರೆಸಿಕೊಂಡ ಓರ್ವ ಆರೋಪಿ ಮೇಲೆ ಈಗಾಗಲೇ ಗುಂಡಾ ಕಾಯ್ದೆ ಅಡಿಯಲ್ಲಿ ಕಳೆದ ವರ್ಷ ಕ್ರಮ ಕೈಗೊಳ್ಳಲಾಗಿತ್ತು.
ಡಕಾಯತಿಗೆ ಸಂಚು ರೂಪಿಸುತ್ತಿರುವದನ್ನು ವಿಫಲಗೊಳಿಸಿದಂತಹ ಪೊಲೀಸ್ ಅಧಿಕಾರಿ ಮತ್ತು  ಸಿಬ್ಬಂದಿಗಳ ತಂಡದ ಕೆಲಸವನ್ನು  ಎಸ್.ಪಿ. ರವರು ಪ್ರಶಂಸಿಸಿ, ನಗದು ಬಹುಮಾನವನ್ನು ಘೋಷಿಸಿದ್ದಾರೆ.

Latest Indian news

Popular Stories