ಔರಾದ್ | ಎಂಟು ದಿನದ ಬಳಿಕ ಕಲುಷಿತ ನೀರು ಪೂರೈಕೆ

ಕುಡಿಯುವ ನೀರಿಗಾಗಿ ಕಳೆದ ಎಂಟು ದಿನಗಳಿಂದ ಕಾಯುತ್ತ ಕುಳಿತ ಪಟ್ಟಣದ ಜನರಿಗೆ ಬುಧವಾರ ಕಲುಷಿತ ನೀರು ಪೂರೈಕೆಯಾಗಿದೆ.

ಹಾಲಹಳ್ಳಿ ಬ್ಯಾರೇಜ್‍ನಿಂದ ಪಟ್ಟಣದ ವಿವಿಧ ವಾರ್ಡ್‍ಗಳಿಗೆ ಪೂರೈಸಿದ ನೀರು ಕುಲುಷಿತವಾಗಿದ್ದು, ಕುಡಿಯಲು ಅಷ್ಟೇ ಅಲ್ಲ, ಬಳಸಲು ಯೋಗ್ಯ ಅಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ನೀರು ಬಂದ್ರೆ ಸಾಕು ಅಂತಿದ್ವಿ, ಈಗ ಬಂದ ನೀರು ಕುಡಿದ್ರೆ ಬದುಕ್ತೀವಿ ಅನ್ನೋ ನಂಬಿಕೆನೇ ಇಲ್ಲ’ ಎಂದು ಈ ಕಲುಷಿತ ನೀರು ಪೂರೈಕೆ ಕುರಿತು ಗಾಂಧಿ ಚೌಕ್‍ನ ವಾರ್ಡ್ ನಂಬರ್ 7ರ ಮಹಿಳೆಯರು ಗೋಳು ತೋಡಿಕೊಂಡಿದ್ದಾರೆ.

ನಾವು ಬೇಸಿಗೆ ಆರಂಭದಿಂದಲೂ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದೇವೆ. ಎಂಟು ದಿನಗಳಿಂದ ಹನಿ ನೀರು ಬಂದಿಲ್ಲ. ಈಗ ಬಂದಿರುವ ನೀರು ಗಬ್ಬು ವಾಸನೆ ಬರುತ್ತಿವೆ. ಜಾನುವಾರುಗಳು ಕುಡಿಯುತ್ತಿಲ್ಲ’ ಎಂದು ಪ್ರವಾಸಿ ಬಂದಿರದ ಬಳಿಯ ಶಿವನಗರ ಬಡಾವಣೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Latest Indian news

Popular Stories