
Bidar
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣ | ಸಚಿವ ಶರಣ ಪ್ರಕಾಶ್ ಪಾಟೀಲರನ್ನು ಕೂಡಲೇ ಬಂಧಿಸಲು ಕೇಂದ್ರ ಸಚಿವ ಭಗವಂತ ಖೂಭಾ ಆಗ್ರಹ..
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಸಚಿವ ಶರಣ ಪ್ರಕಾಶ್ ಪಾಟೀಲರನ್ನು ಕೂಡಲೇ ಬಂಧಿಸಲು ಕೇಂದ್ರ ಸಚಿವ ಭಗವಂತ ಖೂಭಾ ಆಗ್ರಹಿಸಿದ್ದಾರೆ.
ಬೀದರ್ ಹಾಲಹಳ್ಳಿ ವಿವಿ ಕ್ಯಾಂಪಸ್ ನಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಭಾ ಸಚಿವ ಶರಣ ಪ್ರಕಾಶ ಪಾಟೀಲರನ್ನು ಕೂಡಲೇ ಬಂಧಿಸಬೇಕು ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತನ ಕುಟುಂಬಕ್ಕೆ ನ್ಯಾಯ ಒದಗಿಸಲು ಸಚಿವ ಶರಣ ಪ್ರಕಾಶ್ ಪಾಟೀಲ್ ಈ ಕೂಡಲೇ ರಾಜೀನಾಮೆ ನೀಡಬೇಕು.
ಈ ಪ್ರಕರಣದ ಮೇಲೆ ಕಾಂಗ್ರೆಸ್ ನಾಯಕರು ಪ್ರಭಾವ ಬೀರಿ ಸಾಕ್ಷಿಯನ್ನು ತಿರುಚುವ ಪ್ರಯತ್ನ ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಪ್ರಕರಣವನ್ನ ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಸಚಿವ ಭಗವಂತ ಖೂಭಾ ಒತ್ತಾಯಿಸಿದ್ದಾರೆ.




