ವಿಶ್ವ ಬಾಲಕಾರ್ಮಿಕ ಪದ್ಧತಿಯಡಿ 14ರಿಂದ 18 ವರ್ಷದೊಳಗಿ ಮಕ್ಕಳನ್ನು ದುಡಿಸಿಕೊಂಡರೆ 2 ವರ್ಷ ಜೈಲು ಶಿಕ್ಷೆ

ಬೀದರ ಜೂನ್ 11 (ಕರ್ನಾಟಕ ವಾರ್ತೆ):- ಜಿಲ್ಲೆಯಾದ್ಯಂತ ಕೋವಿಡ್-19 ವ್ಯಾಪಾಕವಾಗಿ ಹರಡುತ್ತಿರುವುದರಿಂದ ಜಿಲ್ಲಾ ಮಟ್ಟ ಮತ್ತು ತಾಲೂಕಾ ಮಟ್ಟದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಜೂನ.12 ರಂದು ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಬೀದರ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಅಂಗಡಿ, ವಾಣಿಜ್ಯ, ಉದ್ದಿಮೆ, ಮತ್ತು ಕಾರ್ಖಾನೆಗಳಲ್ಲಿ 14 ವರ್ಷದೊಳಗಿರುವ ಮಕ್ಕಳನ್ನು ಮತ್ತು 18 ವರ್ಷದೊಳಗಿರುವ ಮಕ್ಕಳನ್ನು ಅಪಾಯಕಾರಿ ಅಂಗಡಿ, ವಾಣಿಜ್ಯ, ಉದ್ದಿಮೆ, ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳಬಾರದು. ಒಂದು ವೆಳೆ ಕೆಲಸಕ್ಕೆ ದುಡಿಸಿಕೊಂಡರೆ ತಪ್ಪಿತಸ್ಥ ಮಾಲೀಕರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಮತ್ತು ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ 1986ರ ತಿದ್ದುಪಡಿ ಕಾಯ್ದೆ 2016ರ ಪ್ರಕಾರ 50000 ರೂ. ವರೆಗೆ ದಂಡ ಮತ್ತು 2 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ 20000 ರೂ. ಪರಿಹಾರ ವಸೂಲಾತಿ ಮಾಡಲಾಗುವುದು ಎಂದು ಖಾಸಗಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories