Bidar

ಶಾಸಕ ಪ್ರಭು ಚವ್ಹಾಣರಿಂದ ಅಭಿವೃದ್ಧಿ ಕೆಲಸಗಳ ಪರಿಶೀಲನೆ ನಾಗೂರ(ಬಿ) 220 ಕೆ.ವಿ ಕಾಮಗಾರಿಗೆ ಆಕ್ರೋಶ

—
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ನವೆಂಬರ್ 6ರಂದು ಔರಾದ(ಬಿ) ತಾಲ್ಲೂಕಿನ ನಾಗೂರ(ಬಿ), ಬಲ್ಲೂರ(ಜೆ) ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ದಿಢೀರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ನಾಗೂರ(ಬಿ) ಗ್ರಾಮದಲ್ಲಿ ನಡೆಯುತ್ತಿರುವ 220 ಕೆ.ವಿ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಸ್ಥಳದಲ್ಲಿ ಸುತ್ತಾಡಿ ಕೆಲಸದ ಗುಣಮಟ್ಟವನ್ನು ವೀಕ್ಷಿಸಿದರು. ಹೊಸದಾಗಿ ಕಟ್ಟಿರುವ ಕಾಂಪೌAಡ್ ಗೋಡೆಯಲ್ಲಿ ದೋಷ ಕಾಣಿಸಿದ್ದರಿಂದ ಗುತ್ತಿಗೆದಾರರ ಮೇಲೆ ಸಿಡಿಮಿಡಿಗೊಂಡರು. ಪಿಲ್ಲರ್‌ಗಳಿಗೆ ಬಳಕೆ ಮಾಡಿರುವ ಕಬ್ಬಿಣದ ಸರಳುಗಳನ್ನು ಕಂಡು ದೊಡ್ಡ ಕಟ್ಟಡಕ್ಕೆ ಅದಕ್ಕೆ ತಕ್ಕಂತೆ ಸರಳು ಬಳಕೆಯಾಗಿಲ್ಲವೆಂದು ಸಿಟ್ಟಾದರು. ಪ್ರೊಜೆಕ್ಟ್ ಮ್ಯಾನೇಜರ್ ರೇಣುಕಾ ಹಾಗೂ ಚೀಫ್ ಇಂಜಿನೀಯರ್ ಗಿರಿಧರ್ ಕುಲಕರ್ಣಿ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಬೇಸರ ಹೊರಹಾಕಿದರು. ನೂರಾರು ವರ್ಷಗಳ ವರೆಗೆ ಜನತೆಯ ಉಪಯೋಗಕ್ಕೆ ಬರುವ ಯೋಜನೆ ಸಮರ್ಕವಾಗಿ ಆಗುತ್ತಿಲ್ಲವೆಂದು ಆಕ್ರೋಶಗೊಂಡರು.
ಅಧಿಕಾರಿಗಳು ಕೆಲಸ ವಹಿಸಿದ ನಂತರ ಕೈಕಟ್ಟಿ ಕುಳಿತರೆ ಕಾಮಗಾರಿ ಸರಿಯಾಗಿ ಆಗುವುದಿಲ್ಲ. ಕಛೇರಿಗಳಿಗೆ ಸೀಮಿತವಾಗದೇ ಪ್ರತಿ ಹಂತದಲ್ಲಿಯೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಲ್ಲಿ ಗುತ್ತಿಗೆದಾರರು ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಆರಂಭಿಕ ಹಂತದಲ್ಲಿಯೇ ದೋಷಗಳು ಕಾಣಿಸಿದರೆ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುವುದು ಹೇಗೆ ? ಎಂದು ಪ್ರಶ್ನಿಸಿದರು.

ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಸತತ ಪ್ರಯತ್ನ ವಹಿಸಿ ಕಾಮಗಾರಿಗೆ ಅನುದಾನ ತಂದು ಕೆಲಸ ಆರಂಭಿಸಲಾಗಿದೆ. ನೂರಾರು ವರ್ಷಗಳ ವರೆಗೆ ಜನರ ಉಪಯೋಗಕ್ಕೆ ಬರುವ ಈ ಯೋಜನೆ ಸರಿಯಾಗಿ ಆಗಬೇಕು. ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಕೆಲಸ ಕಳಪೆಯಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಬಳಿಕ ಬಲ್ಲೂರ(ಜೆ) ಗ್ರಾಮದಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಸ್ಥಳಕ್ಕೆ ತೆರಳಿ, ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಸೂಕ್ಷö್ಮವಾಗಿ ಗಮನಿಸಿದರು. ಕ್ಯೂರಿಂಗ್ ಕೆಲಸ ಸರಿಯಾಗಿ ಆಗುತ್ತಿಲ್ಲವೆಂದು ಅನಿಸುತ್ತಿದೆ. ಅಧಿಕಾರಿಗಳು ಏಕೆ ಕಾಮಗಾರಿ ಗಮನಿಸುತ್ತಿಲ್ಲವೆಂದು ಸಿಟ್ಟಾದರು. ಸಂಬAಧಿಸಿದ ಗುತ್ತಿಗೆದಾರರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಕೆಲಸದ ಬಗ್ಗೆ ವಿವರಣೆ ಪಡೆದರು. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದೇನೆ. ಕೆಲಸ ನಿಧಾನಗತಿಯಿಂದ ನಡೆಯುತ್ತಿದೆ. ಕಾಮಗಾರಿ ತೃಪ್ತಿದಾಯಕವಾಗಿಲ್ಲ. ಔರಾದ(ಬಿ) ಕ್ಷೇತ್ರದಲ್ಲಿನ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುವಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಸಂಬAಧಿಸಿದ ಶಾಲಾ ಕಟ್ಟಡ ಸರಿಯಾಗಿ ಆಗಬೇಕು. ಲೋಪಗಳು ಕಂಡುಬAದರೆ ಸಹಿಸುವುದಿಲ್ಲವೆಂದು ತಿಳಿಸಿದರು.
ಇದೇ ವೇಳೆ ಗ್ರಾಮದಲ್ಲಿ ನಡೆಯುತ್ತಿರುವ ರೇವಪಯ್ಯಾ ಮಂದಿರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಗ್ರಾಮದ ಆರಾಧ್ಯ ದೈವ ರೇವಪಯ್ಯಾ ಮಂದಿರವು ಜನತೆಗೆ ಧಾರ್ಮಿಕ ಭಾವನೆಗಳಿಗೆ ಸಂಬAಧಿಸಿರುವುದರಿAದ ಕೆಲಸ ಅಚ್ಚುಕಟ್ಟಾಗಿ ಆಗಬೇಕೆಂದು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
*ಆಸ್ಪತ್ರೆ ನವೀಕರಣ ಕಾಮಗಾರಿ ವೀಕ್ಷಣೆ:* ಔರಾದ(ಬಿ) ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು. ಗೋಡೆ ನವೀಕರಣ, ನೆಲಹಾಸು ಕೆಲಸವನ್ನು ನೋಡಿ, ಗುಣಮಟ್ಟವನ್ನು ಪರಿಶೀಲಿಸಿದರು. ಆಸ್ಪತ್ರೆ ನವೀಕರಣಕ್ಕೆ ಬಳಕೆ ಮಾಡುವ ಎಲ್ಲ ಉಪಕರಣಗಳು ಗುಣಮಟ್ಟದಿಂದ ಕೂಡಿರಬೇಕು. ಕ್ಷೇತ್ರದ ಬಡ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆಯನ್ನು ನವೀಕರಿಸಲಾಗುತ್ತಿದೆ. ಆಸ್ಪತ್ರೆಯನ್ನು ಸುಂದರವಾಗಿ ಮಾಡಬೇಕೆಂದು ತಿಳಿಸಿದರು. ನಂತರ ಔರಾದ(ಬಿ) ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಔರಾದ ಎಪಿಎಂಸಿ ಅಧ್ಯಕ್ಷ ದೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ರಾಜಕುಮಾರ ಸೋರಳ್ಳಿ, ಬಾಲಾಜಿ ವಾಗ್ಮಾರೆ, ರಮೇಶ ಪಾಟೀಲ ಪಾಶಾಪೂರ, ಶೀನು ಖೂಬಾ, ಎಂ.ಡಿ ನಯ್ಯೂಮ್, ಶಿವಕುಮಾರ ಪಾಂಚಾಳ, ಶಿವಾಜಿರಾವ ಕಾಳೆ, ಮಾದಪ್ಪಾ ಮಿಠಾರೆ, ಪ್ರಕಾಶ ಜೀರ್ಗೆ, ಬಾಲಾಜಿ ಠಾಕೂರ, ಸಂದೀಪ ಪಾಟೀಲ, ಲೋಕೇಶ ಬಿರಾದಾರ ಹಾಗೂ ಇತರರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button