ಬೀದರ್: ಡಿಸೆಂಬರ್ 4 ರಂದು ಜಿಲ್ಲೆಯ ಸಾಂಗೊಳಗಿ ಗ್ರಾಮದ ರೈತ ಕರಬಸಪ್ಪ ಮೇತ್ರೆ ಎಂಬುವರ ದನದ ಕೊಟ್ಟಿಗೆಯಲ್ಲಿ ಕಟ್ಟಿದ ಎಮ್ಮೆ ಮತ್ತು ಕರುವನ್ನು ಖದೀಮರು ಕದ್ಯೊಯ್ದಿದ್ದರು.
ರೈತನ ದೂರಿನ್ವಯ ಘಟನೆ ಕುರಿತು ಮಾಹಿತಿ ಪಡೆದ ಬಗದಲ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ರೈತನ ದನದ ಕೊಟ್ಟಿಗೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು
ಇಂದು ಬೆಳ್ಳಿಗೆ 11 ಗಂಟೆಯ ವೇಳೆಗೆ 3 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ
ಬಂಧಿತರಿಂದ ಎಮ್ಮೆ,ಕರು,ವಾಹನ ಸೇರಿ ಒಟ್ಟು 4.80 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಗದಲ್ ಪೊಲೀಸ್ ಠಾಣೆಯ ಪಿಎಸ್ಐ ಸುವರ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು.ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ ಯವರೂ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
ಹನಮಂತ ದೇಶಮುಖ
ಜಿಲ್ಲಾ ವರದಿಗಾರರು
THG ಕನ್ನಡ